ಬಂಧನ
(ಸಾಂದರ್ಭಿಕ ಚಿತ್ರ)
ಇಂಫಾಲ: ನಿಷೇಧಿತ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷ (ಪಿಡಬ್ಲ್ಯೂಜಿ) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು, ಜಿರಿಬಮ್ ಜಿಲ್ಲೆಯ ನಿಂಗ್ಸಿಂಗ್‌ಖುಲ್‌ನ ಥೋಯಿದಮ್ ಸುರೇಶ್ ಸಿಂಗ್ ಅಲಿಯಾಸ್ ಲೆಂಬಾ (34) ಎಂಬಾತನನ್ನು ಭಾನುವಾರ ಬಂಧಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯ ಉಪೋಕ್ಪಿಯಲ್ಲಿ ಸಲಾಮ್ ಮಾಲೆಮ್‌ಗಂಬಾ ಸಿಂಗ್ ಅಲಿಯಾಸ್ ವಾಂಗ್ಲೆನ್ (23) ಎಂಬ ಮತ್ತೊಬ್ಬ ಉಗ್ರನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.