ADVERTISEMENT

ಉತ್ತರ ಪ್ರದೇಶ: ಇಬ್ಬರು ಐಪಿಎಸ್ ಅಧಿಕಾರಿಗಳ ಅಮಾನತು

ಪಿಟಿಐ
Published 24 ಆಗಸ್ಟ್ 2020, 11:52 IST
Last Updated 24 ಆಗಸ್ಟ್ 2020, 11:52 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ:ಅವ್ಯವಹಾರಗಳಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ಸೋಮವಾರ ಅಮಾನತುಗೊಳಿಸಿದೆ.

ಡಿಐಜಿಗಳಾದ ದಿನೇಶ್‌ ಚಂದ್ರ ದುಬೆ ಮತ್ತು ಅರವಿಂದ್‌ ಸೇನ್‌ ಅಮಾತನುಗೊಂಡವರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನಿರ್ದೇಶನದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

ರಾಯ ಬರೇಲಿ ಜಿಲ್ಲೆಯ ಶಿವಗರ್ಹಾದ್‌ನಲ್ಲಿ ಕಸ್ತೂರ ಬಾ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ, ಲಖನೌನಲ್ಲಿ ಅಂಗವಿಕಲರಿಗಾಗಿ ಕಟ್ಟಡ ನಿರ್ಮಾಣ, ಬಸ್‌ ನಿಲ್ದಾಣ ಕಾಮಗಾರಿ ಟೆಂಡರ್‌ನಲ್ಲಿ ದಿನೇಶ್‌ ಚಂದ್ರ ದುಬೆ ಅಕ್ರಮ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ತಮ್ಮ ಲಾಭಕ್ಕೆ ಈ ಕಾಮಗಾರಿಗಳ ಟೆಂಡರ್‌ ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ.

ADVERTISEMENT

ಇನ್ನೂ ಅರವಿಂದ್‌ ಸೇನ್‌ ಅವರು ಪಶುಸಂಗೋಪನಾ ಇಲಾಖೆಯಲ್ಲಿ ವಂಚನೆ ಮತ್ತು ಅಕ್ರಮ ನಡೆಸಿದ ಆರೋಪಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.