ADVERTISEMENT

ಶ್ವೇತ ಭವನದ ಏಳು ಮಂದಿಗೆ ಕೋವಿಡ್‌ ಸೋಂಕು ದೃಢ

ಪಿಟಿಐ
Published 3 ಅಕ್ಟೋಬರ್ 2020, 7:48 IST
Last Updated 3 ಅಕ್ಟೋಬರ್ 2020, 7:48 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಜಿ ಸಲಹೆಗಾರ, ಅವರ ಪ್ರಚಾರ ವ್ಯವಸ್ಥಾಪಕ, ಇಬ್ಬರು ಸಂಸದರು ಹಾಗೂ ಶ್ವೇತ ಭವನದ ಮೂವರು ಪತ್ರಕರ್ತರಿಗೆ ಕೋವಿಡ್‌ ತಗುಲಿರುವುದು ದೃಢಪಟ್ಟಿದೆ.

ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ಪತ್ನಿ ಮೆಲೇನಿಯಾ ಟ್ರಂಪ್‌‌ ಅವರಿಗೆ ಶುಕ್ರವಾರ ಸೋಂಕು ದೃಢಪಟ್ಟಿತ್ತು.ಬೆಥೆಸ್ಡಾದ ವಾಲ್ಟರ್ ರೀಡ್ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಟ್ರಂಪ್‌ ಚಿಕಿತ್ಸೆ ಪಡೆಯುತ್ತಿದ್ದು, ಮೆಲೇನಿಯಾ ಅವರು ಶ್ವೇತ ಭವನದಲ್ಲಿ ಪ್ರತ್ಯೇಕ ವಾಸಕ್ಕೊಳಗಾಗಿದ್ದಾರೆ.

ಇದರ ಬೆನ್ನಲ್ಲೇಉತ್ತರ ಕೆರೊಲಿನಾದ ರಿಪಬ್ಲಿಕನ್ ಸಂಸದ ಥಾಮ್ ಟಿಲ್ಲಿಸ್ ಮತ್ತು ಉತಾಹ್‌ನ ಸಂಸದ ಮೈಕ್ ಲೀ ಅವರಲ್ಲೂ ಸೋಂಕು ದೃಢಪಟ್ಟಿದೆ.

ADVERTISEMENT

‘ಕಳೆದ ಕೆಲವು ತಿಂಗಳಿನಿಂದ ನಾನು ಕೋವಿಡ್‌ ಪರೀಕ್ಷೆಗೆ ಒಳಗಾಗುತ್ತಿದ್ದೇನೆ. ಕಳೆದ ಶನಿವಾರ ಕೋವಿಡ್‌ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರಲಿಲ್ಲ. ಆದರೆ ಶುಕ್ರವಾರ ರಾತ್ರಿ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ತಗುಲಿರುವುದು‌ ದೃಢಪಟ್ಟಿದೆ’ ಎಂದುಥಾಮ್ ಟಿಲ್ಲಿಸ್ ಅವರು ತಿಳಿಸಿದರು.

‘ವೈದ್ಯರ ಸಲಹೆ ಮೇರೆಗೆ ನಾನು ನಿವಾಸದಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ನನಗೆ ಯಾವುದೇ ಕೋವಿಡ್‌ ಲಕ್ಷಣಗಳು ಇಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.