ADVERTISEMENT

ಉತ್ತರಪ್ರದೇಶದ ಇಬ್ಬರು ಕಾಂಗ್ರೆಸ್‌ ನಾಯಕರು ಟಿಎಂಸಿಗೆ ಸೇರ್ಪಡೆ

ಪಿಟಿಐ
Published 25 ಅಕ್ಟೋಬರ್ 2021, 14:32 IST
Last Updated 25 ಅಕ್ಟೋಬರ್ 2021, 14:32 IST
ಮಮತಾ ಬ್ಯಾನರ್ಜಿ 
ಮಮತಾ ಬ್ಯಾನರ್ಜಿ    

ಸಿಲಿಗುರಿ: ಉತ್ತರ ಪ್ರದೇಶದ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಸೋಮವಾರ ಪಶ್ಚಿಮಬಂಗಾಳದ ಸಿಲಿಗುರಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದರು.

ಟಿಎಂಸಿ ಸೇರಿದ ರಾಜೇಶ್‌ಪತಿ ತ್ರಿಪಾಠಿ ಮತ್ತು ಲಲಿತ್‌ಪತಿ ತ್ರಿಪಾಠಿ ಅವರು, ಉತ್ತರಪ್ರದೇಶ ಮತ್ತು ಕೇಂದ್ರದಲ್ಲಿ ಟಿಎಂಸಿ ವರಿಷ್ಠರ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಟ ನಡೆಸುವುದಾಗಿ ಹೇಳಿದರು.

ರಾಜೇಶ್‌ಪತಿ ತ್ರಿಪಾಠಿ ವಿಧಾನಪರಿಷತ್‌ ಮಾಜಿ ಸದಸ್ಯ. ಲಲಿತೇಶ್‌ಪತಿ ತ್ರಿಪಾಠಿ ಮಾಜಿ ಶಾಸಕ ಮತ್ತು ಉತ್ತರಪ್ರದೇಶದ ಕಾಂಗ್ರೆಸ್‌ನ ಮಾಜಿ ಉಪಾಧ್ಯಕ್ಷ. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲಪತಿ ತ್ರಿಪಾಠಿಯವರಿಗೆ ರಾಜೇಶ್‌ಪತಿ ಮೊಮ್ಮಗನಾದರೆ, ಲಲಿತೇಶ್‌ಪತಿ ಮರಿ ಮೊಮ್ಮಗ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ADVERTISEMENT

‘ಟಿಎಂಸಿ ಮೇಲೆ ಜನರ ನಂಬಿಕೆ ಹೆಚ್ಚುತ್ತಿದೆ. ಇಬ್ಬರು ನಾಯಕರು ಸೇರಿದ್ದರಿಂದ ನಮ್ಮದು ಈಗ ಅಖಿಲ ಭಾರತ ಪಕ್ಷವಾಗಿದೆ. ಈಗ ನಾವು ಬಿಜೆಪಿಗೆ ನಿಜವಾದ ಪೈಪೋಟಿ ನೀಡಬಹುದು’ ಎಂದು ಬ್ಯಾನರ್ಜಿ ಹೇಳಿದರು.

ಗೋವಾದಲ್ಲಿ ಟಿಎಂಸಿ ರಾಜಕೀಯ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಬಿಜೆಪಿ ತಡೆಯೊಡ್ಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.