ADVERTISEMENT

ಹೈದರಾಬಾದ್: ದುರ್ಗಾ ಮಾತೆಯ ಮೂರ್ತಿಗೆ ಹಾನಿ- ಇಬ್ಬರು ಮುಸ್ಲಿಂ ಮಹಿಳೆಯರ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2022, 9:49 IST
Last Updated 27 ಸೆಪ್ಟೆಂಬರ್ 2022, 9:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ದುರ್ಗಾ ಮಾತೆಯ ಮೂರ್ತಿಗೆ ಹಾನಿ ಮಾಡಿದ ಆರೋಪದಡಿ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಎಎನ್‌ಐ ಟ್ವೀಟಿಸಿದೆ.

ಸ್ಪ್ಯಾನರ್ ಹಿಡಿದಿದ್ದ ಒಬ್ಬ ಮಹಿಳೆ ದುಷ್ಕೃತ್ಯ ತಡೆಯಲು ಯತ್ನಿಸಿದ ಜನರ ಮೇಲೆ ದಾಳಿ ನಡೆಸಿದ್ದಾಳೆ ಎಂದು ವರದಿ ತಿಳಿಸಿದೆ. ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹೈದರಾಬಾದ್‌ನ ಕೇಂದ್ರ ವಲಯದ ಡಿಸಿಪಿ ಚಂದ್ರ ತಿಳಿಸಿದ್ದಾರೆ.

ಚರ್ಚ್ ಹೊರಗಡೆ ಕಾಣಿಸಿಕೊಂಡ ಇಬ್ಬರು ಮಹಿಳೆಯರು, ಮೊದಲಿಗೆ ಚರ್ಚ್ ಹೊರಗೆ ನಿರ್ಮಿಸಲಾಗಿರುವ ವರ್ಜಿನ್ ಮೇರಿ ಮೂರ್ತಿಯನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ. ಬಳಿಕ, ಹತ್ತಿರದಲ್ಲೇ ನವರಾತ್ರಿ ಪ್ರಯುಕ್ತ ಹಾಕಲಾಗಿದ್ದ ದುರ್ಗಾ ಮಾತೆಯ ಪೂಜಾ ಪೆಂಡಾಲ್ ಒಳಗೆ ನುಗ್ಗಿ ಮೂರ್ತಿಗೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿರುವುದಾಗಿ ವರದಿ ತಿಳಿಸಿದೆ.

ADVERTISEMENT

ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದ್ದು, ಮಹಿಳೆಯರಿಗೆ ಪಿಎಫ್‌ಐ ನಂಟಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.

ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿದೆ. ದುರ್ಗಾ ಮೂರ್ತಿಗೆ ಹಾನಿ ಮಾಡುತ್ತಿದ್ದ ಮಹಿಳೆಯರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.