ಸುಪ್ರೀಂ ಕೋರ್ಟ್
ನವದೆಹಲಿ: 'ಉದಯಪುರ ಫೈಲ್ಸ್ - ಕನ್ಹಯ್ಯ ಲಾಲ್ ಟೈಲರ್ ಮರ್ಡರ್' ಚಿತ್ರದ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿರುವ ಸುಪ್ರೀಂ ಕೋರ್ಟ್, ಚಿತ್ರದ ವಿರುದ್ಧ ಆಕ್ಷೇಪಣೆಗಳನ್ನು ಆಲಿಸಲು ಕೇಂದ್ರವು ನೇಮಿಸಿರುವ ಸಮಿತಿಯ ನಿರ್ಧಾರಕ್ಕಾಗಿ ಕಾಯುವಂತೆ ಚಲನಚಿತ್ರ ನಿರ್ಮಾಪಕರಿಗೆ ಸೂಚಿಸಿದೆ.
ಸಮಿತಿಯು ಇಂದು ಮಧ್ಯಾಹ್ನ 2:30ಕ್ಕೆ ಸಭೆ ಸೇರಲಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಚಿತ್ರ ಬಿಡುಗಡೆ ಬಳಿಕ ಕನ್ಹಯ್ಯ ಲಾಲ್ ಟೈಲರ್ ಕೊಲೆ ಪ್ರಕರಣದ ಆರೋಪಿಗಳು ತಮ್ಮ ಮಾನಹಾನಿಗೆ ಪರಿಹಾರ ಕೋರಲು ಬರುವುದಿಲ್ಲ. ಆದರೆ, ಚಿತ್ರ ನಿರ್ಮಾಪಕರು ಪರಿಹಾರ ಕೋರಬಹುದು ಎಂದು ಹೇಳಿದೆ.
ಚಿತ್ರ ಬಿಡುಗಡೆಗೆ ತಡೆ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಚಿತ್ರದ ಕುರಿತಂತೆ ವಾದಗಳನ್ನು ಆಲಿಸಿದ ನಂತರ ಸಮಯ ತೆಗೆದುಕೊಳ್ಳದೆ ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವಂತೆ ಪೀಠವು ಕೇಂದ್ರದ ಸಮಿತಿಗೆ ಸೂಚಿಸಿದೆ.
ಜುಲೈ 11ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಜುಲೈ 10 ರಂದು ದೆಹಲಿ ಹೈಕೋರ್ಟ್ ತಡೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.