ADVERTISEMENT

ಶಿವಸೇನಾ ಮುಖ್ಯಸ್ಥರಾಗಿ ಉದ್ಧವ್‌ ಠಾಕ್ರೆ ಮುಂದುವರಿಕೆ

ಪಿಟಿಐ
Published 7 ಜುಲೈ 2022, 15:38 IST
Last Updated 7 ಜುಲೈ 2022, 15:38 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಬಹುತೇಕ ಶಾಸಕರು ಸೇರಿದ್ದರೂ, ಉದ್ಧವ್ ಠಾಕ್ರೆ ಅವರು ಶಿವಸೇನಾದ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ ಎಂದು ಸಂಸದ ಅರವಿಂದ್ ಸಾವಂತ್ ಗುರುವಾರ ಹೇಳಿದ್ದಾರೆ.

‘ರಾಜಕೀಯ ಪಕ್ಷವಾಗಿ ಶಿವಸೇನಾ ಮತ್ತು ಸೇನಾ ಶಾಸಕಾಂಗ ಪಕ್ಷವು ಎರಡು ವಿಭಿನ್ನ ಘಟಕಗಳು. ಬಂಡಾಯ ಶಾಸಕರ ಗುಂಪಿಗೆ ಮಾನ್ಯತೆ ಇಲ್ಲ. ಮೂರನೇ ಎರಡು ಭಾಗದಷ್ಟು ಶಾಸಕರು ಮತ್ತೊಂದು ಬಣಕ್ಕೆ ಹೋದರೂ, ಉದ್ಧವ್ ಠಾಕ್ರೆ ಶಿವಸೇನಾ ಮುಖ್ಯಸ್ಥರಾಗಿ ಉಳಿಯುತ್ತಾರೆ. ಕಾನೂನಿನ ಪ್ರಕಾರ, ಶಾಸಕಾಂಗ ಪಕ್ಷದ ನಾಯಕರನ್ನು ಅವರು ಮಾತ್ರ ನೇಮಿಸಬಹುದು’ ಎಂದು ಸಾವಂತ್ ವೆಬ್ ಪೋರ್ಟಲ್‌ಗೆ ತಿಳಿಸಿದ್ದಾರೆ.

‘ಬಂಡಾಯ ಶಾಸಕರು ತಮ್ಮ ಗುಂಪನ್ನು ತಕ್ಷಣವೇ ಬೇರೆ ಪಕ್ಷದೊಂದಿಗೆ ವಿಲೀನಗೊಳಿಸಬೇಕು. ಆದರೆ ಅವರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸಿಲ್ಲ. ಆದ್ದರಿಂದ ಅವರಿಗೆ ಯಾವುದೇ ಮಾನ್ಯತೆ ಇಲ್ಲ’ ಎಂದರು.

ADVERTISEMENT

‘ಠಾಕ್ರೆ ಮತ್ತು ಶಿವಸೇನಾವನ್ನು ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಸಾವಂತ್‌ ಪ್ರತಿಪಾದಿಸಿದ್ದಾರೆ. ಆದರೆ ‘ ಶಿಂಧೆ ನೇತೃತ್ವದ ಬಣವೇ ಪಕ್ಷದ ನಿಜವಾದ ಹಕ್ಕುದಾರ ಎಂದು ಶಿವಸೇನಾ ಬಂಡಾಯ ಶಾಸಕ ಗುಲಾಬ್ರಾವ್ ಪಾಟೀಲ್’ ಬುಧವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.