ಚಂಡೀಗಢ: ಸ್ವಾತಂತ್ರ್ಯ ಹೋರಾಟಗಾರ ಉದಮ್ ಸಿಂಗ್ ಅವರ ಹುತಾತ್ಮ ದಿನವಾದ ಜುಲೈ 31ರಂದು ಸರ್ಕಾರಿ ರಜೆ ಘೋಷಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ.
ಪಂಜಾಬ್‌ನ ಸರ್ಕಾರಿ ಅಧಿಕಾರಿಗಳು, ಮಂಡಳಿಗಳು ಮತ್ತು ನಿಗಮಗಳಿಗೆ ರಜೆ ಘೋಷಿಸಲಾಗಿದೆ ಎಂದು ಪಂಜಾಬ್‌ನ ಸಚಿವ ಹಾಗೂ ಎಎಪಿ ರಾಜ್ಯಾಧ್ಯಕ್ಷ ಅಮನ್ ಅರೋರಾ ತಿಳಿಸಿದ್ದಾರೆ.
ಪಟಿಯಾಲ-ಭವಾನಿಗಢ ರಾಷ್ಟ್ರೀಯ ಹೆದ್ದಾರಿಗೆ ಉದಮ್ ಸಿಂಗ್ ಅವರ ಹೆಸರಿಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಉದಮ್ ಸಿಂಗ್ ಅವರ ಜನ್ಮಸ್ಥಳವಾದ ಸುನಮ್‌ನಲ್ಲಿ ಜುಲೈ 31ರಂದು ರಾಜ್ಯ ಸರ್ಕಾರದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಎಎಪಿ ರಾಷ್ಟ್ರೀಯ ವಕ್ತಾರ ಅರವಿಂದ್ ಕ್ರೇಜಿವಾಲ್ ಅವರು ಭಾಗವಹಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.