ADVERTISEMENT

ಭಾರತ ವಿರೋಧಿ ಚಟುವಟಿಕೆ ಆರೋಪ: ನಿತಾಶಾ ಪೌರತ್ವ ರದ್ದು

ಪಿಟಿಐ
Published 19 ಮೇ 2025, 14:41 IST
Last Updated 19 ಮೇ 2025, 14:41 IST
<div class="paragraphs"><p>ನಿತಾಶಾ ಕೌಲ್‌</p></div>

ನಿತಾಶಾ ಕೌಲ್‌

   

(ಚಿತ್ರ ಕೃಪೆ– X/ @NitashaKaul)

ಲಂಡನ್: ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್‌ ವೆಸ್ಟ್‌ ಮಿನ್‌ಸ್ಟರ್‌ನ ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕಿ, ಕಾಶ್ಮೀರ ಮೂಲದ ಶಿಕ್ಷಣ ತಜ್ಞೆ ನಿತಾಶಾ ಕೌಲ್‌ ತಮ್ಮ ‘ಭಾರತೀಯ ಸಾಗರೋತ್ತರ ಪೌರತ್ವ’ವನ್ನು (ಒಸಿಐ) ಭಾರತ ವಿರೋಧಿ ಚಟುವಟಿಕೆಗಳ ಆರೋಪ ಹೊರಿಸಿ ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂದು ಹೇಳಿದ್ದಾರೆ.

ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಭಾನುವಾರ ‘ಪೋಸ್ಟ್‌’ ಮಾಡಿರುವ ಅವರು, ‘ಭಾರತ ಸರ್ಕಾರದಿಂದ ಮಾಹಿತಿ ಸ್ವೀಕರಿಸಿದ್ದೇನೆ. ನೀವು ದ್ವೇಷಪೂರಿತ ಮತ್ತು ಅವಹೇಳನಕಾರಿ ಇತಿಹಾಸ–ಸಂಗತಿಗಳಿಂದ ಪ್ರೇರಿತರಾಗಿದ್ದೀರಿ’ ಎಂದು ಅದು ಆರೋಪಿಸಿದೆ ಎಂದು ಉಲ್ಲೇಖಿಸಿದ್ದಾರೆ.

ಬೆಂಗಳೂರಿನ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ಫೆಬ್ರುವರಿಯಲ್ಲಿ ತಮಗೆ ಅವಕಾಶ ನಿರಾಕರಿಸಿದ್ದನ್ನು ನೆನಪಿಸುತ್ತಾ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ನಿತಾಶಾ, ‘ದ್ವೇಷದ ವಿರುದ್ಧ ಮಾತನಾಡುವ ಶಿಕ್ಷಣ ತಜ್ಞರನ್ನು ಭಾರತದಲ್ಲಿ ಬಂಧಿಸಲಾಗುತ್ತಿದೆ. ಅಲ್ಲದೇ ಹೊರದೇಶದಲ್ಲಿರುವ ಶಿಕ್ಷಣ ತಜ್ಞರನ್ನು ದೇಶ ಮತ್ತು ಕುಟುಂಬದಿಂದ ದೂರ ಮಾಡುವ ಪ್ರಯತ್ನ ನಡೆಯುತ್ತಿದೆ. ದೇಶದ ಒಳಗೆ ಮತ್ತು ಹೊರಗೆ ನಮಗೆ ಸವಾಲು ಒಡ್ಡಬೇಡಿ ಎನ್ನುವ ಸಂದೇಶ ರವಾನಿಸುವ ಪ್ರಯತ್ನ ಇದು’ ಎಂದು ಆರೋಪಿಸಿದ್ದಾರೆ.

ವೆಸ್ಟ್‌ಮಿನ್‌ಸ್ಟರ್‌ ವಿಶ್ವವಿದ್ಯಾಲಯದ ಪ್ರಜಾಪ್ರಭುತ್ವ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ನಿತಾಶಾ ತಮ್ಮ ಸಾಗರೋತ್ತರ ಪೌರತ್ವ ರದ್ದು ಮಾಡಿರುವುದನ್ನು ಖಂಡಿಸಿ, ‘ಗಡಿಯಾಚೆಗಿನ ನಿರ್ಬಂಧವು ಹುಸಿ ನಂಬಿಕೆ, ಸೇಡಿನ ಕ್ರಮವಾಗಿದೆ. ಅಲ್ಪಸಂಖ್ಯಾತ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ವಿದ್ವತ್‌ಪೂರ್ಣ ಕೆಲಸ ಮಾಡಿದ್ದಕ್ಕಾಗಿ ನನ್ನನ್ನು ಶಿಕ್ಷಿಸಲಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.