ADVERTISEMENT

‌ರಷ್ಯಾ ಎದುರಿಸಲು ಶಸ್ತ್ರಾಸ್ತ್ರ ಪೂರೈಸಿ: ಪಾಶ್ಚಾತ್ಯ ದೇಶಗಳಿಗೆ ಉಕ್ರೇನ್‌ ಮನವಿ

ಏಜೆನ್ಸೀಸ್
Published 22 ಫೆಬ್ರುವರಿ 2022, 16:31 IST
Last Updated 22 ಫೆಬ್ರುವರಿ 2022, 16:31 IST
   

ವಾಷಿಂಗ್ಟನ್‌: ರಷ್ಯಾವನ್ನು ಎದುರಿಸಲು ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಉಕ್ರೇನ್‌ ಮಂಗಳವಾರ ಮನವಿ ಮಾಡಿದೆ.

ವಾಷಿಂಗ್ಟನ್‌ನಲ್ಲಿ ನಿಗದಿಯಾಗಿದ್ದ ತಮ್ಮ ಸಭೆಗೂ ಮುನ್ನ ಮಾತನಾಡಿದ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಈ ವಿಷಯ ತಿಳಿಸಿದ್ದಾರೆ.

‘ಉಕ್ರೇನ್‌ಗೆ ಹೆಚ್ಚುವರಿ ರಕ್ಷಣಾತ್ಮಕ ಶಸ್ತ್ರಾಸ್ತ್ರಗಳನ್ನು ನೀಡುವಂತೆ ಆಗ್ರಹಿಸಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಗೆ ಪತ್ರ ನೀಡಿದ್ದೇನೆ. ಅದೇ ಮನವಿಯನ್ನು ಅಮೆರಿಕಕ್ಕೂ ನೀಡಲಿದ್ದೇನೆ‘ ಎಂದು ಅವರು ಹೇಳಿದರು.

ADVERTISEMENT

‘ರಾಜತಾಂತ್ರಿಕತೆ ಮತ್ತು ಶಸ್ತ್ರಾಸ್ತ್ರಗಳೇ ನಮ್ಮ ನಂಬಿಕೆ’ ಎಂದು ಅವರು ತಿಳಿಸಿದ್ದಾರೆ.

ಉಕ್ರೇನ್‌ಗೆ ಯೂರೋಪ್‌ ಒಕ್ಕೂಟದಲ್ಲಿ ಸದಸ್ಯತ್ವ ನೀಡುವಂತೆಯೂ ಕುಲೆಬಾ ಆಗ್ರಹಿಸಿದ್ದಾರೆ.

‘ಉಕ್ರೇನ್‌ಗೆ ಸದಸ್ಯತ್ವ ನೀಡಲು ಯುರೋಪಿಯನ್ ರಾಷ್ಟ್ರಗಳಲ್ಲಿರುವ ಇರುವ ಎಲ್ಲಾ ಹಿಂಜರಿಕೆ ಸಂದೇಹಗಳನ್ನು ಬದಿಗಿಡಲು ನಾನು ಆಗ್ರಹಿಸಿದ್ದೇನೆ. ಆ ಸಮಯ ಬಂದಾಗಿದೆ’ ಎಂದು ವಿದೇಶಾಂಗ ಸಚಿವ ಕುಲೆಬಾ ಹೇಳಿದ್ದಾರೆ.

‘ಯುರೋಪ್ ಇದೀಗ ಮಾಡಬಹುದಾದ ಅತ್ಯುತ್ತಮ ಕಾರ್ಯತಂತ್ರವೆಂದರೆ ಉಕ್ರೇನ್ ಅನ್ನು ತನ್ನೊಳಗೆ ಸೇರಿಸಿಕೊಳ್ಳುವುದೇ ಆಗಿದೆ,’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.