ADVERTISEMENT

ನ್ಯಾಯಮೂರ್ತಿಗಳ ವಿದೇಶ ಪ್ರವಾಸ: ಕೇಂದ್ರದ ಆದೇಶ ರದ್ದು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 2:22 IST
Last Updated 7 ಏಪ್ರಿಲ್ 2022, 2:22 IST
ಕೋರ್ಟ್‌
ಕೋರ್ಟ್‌   

ನವದೆಹಲಿ: ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ವಿದೇಶಗಳಿಗೆ ಖಾಸಗಿ ಭೇಟಿ ಕೈಗೊಳ್ಳಲು ಕೂಡ ಅನುಮತಿ ಪಡೆಯಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್‌ ರದ್ದುಗೊಳಿಸಿದೆ.

‘ವಿದೇಶಗಳಲ್ಲಿನ ರಾಯಭಾರಿ ಕಚೇರಿಗಳಿಗೆ, ವಿದೇಶಾಂಗ ಸಚಿವಾಲಯದ ಪಾಸ್‌ಪೋರ್ಟ್‌ ಹಾಗೂ ವೀಸಾ ವಿಭಾಗಗಳಿಗೆ ನ್ಯಾಯಮೂರ್ತಿಗಳ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹಾಗಾಗಿ, ಇಂಥ ಆದೇಶದ ಅಗತ್ಯವೇ ಇಲ್ಲ’ ಎಂದು ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಹಾಗೂ ಜಸ್ಮೀತ್ ಸಿಂಗ್‌ ಅವರಿದ್ದ ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT