ADVERTISEMENT

ಐಎನ್‌ಎಸ್‌ ಹಮ್ಲಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಶೆಡ್‌ ಕುಸಿತ; 11 ಮಂದಿಗೆ ಗಾಯ

ಪಿಟಿಐ
Published 13 ಜುಲೈ 2021, 6:15 IST
Last Updated 13 ಜುಲೈ 2021, 6:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ‘ಇಲ್ಲಿನ ಮಾಲಾಡ್‌ ಪ್ರದೇಶದ ನೌಕಾ ನೆಲೆಯ ಐಎನ್‌ಎಸ್‌ ಹಮ್ಲಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಶೆಡ್‌ನ ಭಾಗವೊಂದು ಕುಸಿದಿದ್ದು, ಇದರಲ್ಲಿ 11 ಕಾರ್ಮಿಕರಿಗೆ ಗಾಯಗಳಾಗಿವೆ’ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

‘ಐಎನ್‌ಎಸ್‌ ಹಮ್ಲಾದ ಮುಖ್ಯ ಗೇಟ್‌ ಬಳಿ ತಾತ್ಕಾಲಿಕ ಶೆಡ್‌ ಅನ್ನು ನಿರ್ಮಿಸಲಾಗುತ್ತಿತ್ತು.ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ನೌಕಾ ನೆಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅವರು ಹೇಳಿದರು.

‘ಈಗಾಗಲೇ 10 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಇನ್ನೊಬ್ಬರನ್ನು ಟ್ರೈಡೆಂಟ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.