ADVERTISEMENT

ಮಕ್ಕಳಿಗೆ ಸುರಕ್ಷಿತ ಆನ್‌ಲೈನ್‌ ಪರಿಸರ: ಯುನಿಸೆಫ್, ಫೇಸ್‌ಬುಕ್‌ನಿಂದ ಕಾರ್ಯಕ್ರಮ

ಪಿಟಿಐ
Published 10 ಆಗಸ್ಟ್ 2021, 6:17 IST
Last Updated 10 ಆಗಸ್ಟ್ 2021, 6:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ ತಡೆಯಲು ಯುನಿಸೆಫ್‌ ಇಂಡಿಯಾ ಹಾಗೂ ಫೇಸ್‌ಬುಕ್‌ ಕೈಜೋಡಿಸಿವೆ. ಅದರಲ್ಲೂ, ಆನ್‌ಲೈನ್‌ ವೇದಿಕೆಯು ಮಕ್ಕಳಿಗೆ ಸುರಕ್ಷಿತವಾಗಿರಬೇಕು ಎಂಬುದಕ್ಕೆ ಒತ್ತು ನೀಡಲಾಗಿದ್ದು, ಒಂದು ವರ್ಷ ಅವಧಿಯ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿವೆ.

ವರ್ಚುವಲ್‌ ವಿಧಾನದ ಮೂಲಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಸ್ಥಾ ಸಕ್ಸೇನಾ ಖಟ್ವಾನಿ, ಫೇಸ್‌ಬುಕ್‌ನ ಪ್ರೋಗಾಂ ಆ್ಯಂಡ್‌ ಔಟ್‌ರೀಚ್‌ ವಿಭಾಗದ ಮುಖಸ್ಥ ಮಧು ಸಿರೋಹಿ, ಯುನಿಸೆಫ್‌ ಇಂಡಿಯಾದ ಪ್ರತಿನಿಧಿ ಯಸುಮಸಾ ಕಿಮುರಾ ಉಪಸ್ಥಿತರಿದ್ದರು.

‘ಈ ವಿಶೇಷ ಕಾರ್ಯಕ್ರಮಕ್ಕೆ ಆ. 9ರಂದು ಚಾಲನೆ ನೀಡಲಾಗಿದೆ. ಮಕ್ಕಳಿಗಾಗಿ ಸುರಕ್ಷಿತವಾದ ಆನ್‌ಲೈನ್‌ ಹಾಗೂ ಆಫ್‌ಲೈನ್ ಪರಿಸರ ನಿರ್ಮಿಸಲು ಈ ಸಹಭಾಗಿತ್ವ ಶ್ರಮಿಸುವುದು. ಡಿಜಿಟಲ್‌ ಮಾಧ್ಯಮದ ಮೂಲಕ ಅವರ ಕಲಿಕೆ ಸುಲಭವಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಯುನಿಸೆಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಅರಿವು ಹೆಚ್ಚಿಸುವುದು. ಮಕ್ಕಳು, ಕುಟುಂಬಗಳು ಹಾಗೂ ಸಮುದಾಯಗಳ ಮೇಲೆ ಇದರ ಪರಿಣಾಮ ಕುರಿತು ಜಾಗೃತಿ ಮೂಡಿಸುವುದು, ದೌರ್ಜನ್ಯ ತಡೆಯಲು ಹಾಗೂ ಅದಕ್ಕೆ ಪ್ರತಿಕ್ರಿಯಿಸಲು ಬೇಕಾದ ಕೌಶಲಗಳನ್ನು ಕಲಿಸುವುದು ಕಾರ್ಯಕ್ರಮದ ಉದ್ದೇಶ’ ಎಂದೂ ತಿಳಿಸಿದೆ.

‘ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದಾದ್ಯಂತ ನಡೆಯುವ ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಶಾಲಾ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ’ ಎಂದು ಯುನಿಸೆಫ್‌ ಇಂಡಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.