ADVERTISEMENT

ಸಚಿವ ರಾಣೆಯನ್ನು ಮಾ.10ರವರೆಗೆ ಬಂಧಿಸದಂತೆ ಕೋರ್ಟ್‌ ಆದೇಶ

ಪಿಟಿಐ
Published 4 ಮಾರ್ಚ್ 2022, 11:24 IST
Last Updated 4 ಮಾರ್ಚ್ 2022, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ(ಪಿಟಿಐ): ಮಾನನಷ್ಟ ಪ್ರಕರಣವೊಂದರ ಸಂಬಂಧ ಕೇಂದ್ರ ಸಚಿವ ನಾರಾಯಣ ರಾಣೆ ಹಾಗೂ ಅವರ ಪುತ್ರ, ಶಾಸಕ ನಿತೇಶ್ ರಾಣೆ ಅವರನ್ನು ಮಾ.10ರವರೆಗೆ ಬಂಧಿಸದಂತೆ ಇಲ್ಲಿನ ನ್ಯಾಯಾಲಯವೊಂದು ಮಧ್ಯಂತರ ರಕ್ಷಣೆ ನೀಡಿದೆ.

ನಿಗೂಢವಾಗಿ ಸಾವಿಗೀಡಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ವ್ಯವಸ್ಥಾಪಕಿ ದಿ. ದಿಶಾ ಸಾಲಿಯನ್ ಕುರಿತಾಗಿ ನೀಡಿದ ಹೇಳಿಕೆ ಸಂಬಂಧದ ಮಾನನಷ್ಟ ಪ್ರಕರಣದಲ್ಲಿ ಈ ಇಬ್ಬರೂ ನಾಯಕರು ಬಂಧನದ ಭೀತಿ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಂದೆ ಮತ್ತು ಪುತ್ರ ದಿಂಡೋಶಿ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆವರೆಗೆ ಈ ಇಬ್ಬರನ್ನು ಬಂಧಿಸದಂತೆ ಪೊಲೀಸರಿಗೆ ಸೂಚನೆ ನೀಡಿದೆ.

ಏತನ್ಮಧ್ಯೆ, ಶನಿವಾರ ನಾರಾಯಣ ರಾಣೆ ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.