ADVERTISEMENT

50 ಅತಿಥಿಗಳ ಸಮ್ಮುಖದಲ್ಲಿ ಸ್ಮೃತಿ ಇರಾನಿ ಮಗಳ ಮದುವೆ

ಪಿಟಿಐ
Published 10 ಫೆಬ್ರುವರಿ 2023, 3:10 IST
Last Updated 10 ಫೆಬ್ರುವರಿ 2023, 3:10 IST
   

ಜೈಪುರ: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶಾನೆಲ್ಲೆ ಅವರು ಅರ್ಜುನ್ ಭಲ್ಲಾ ಅವರನ್ನು ವಿವಾಹವಾದರು.

ವಿವಾಹ ಸಮಾರಂಭವು 15 ನೇ ಶತಮಾನದ, ಪಾರಂಪರಿಕ ಹೋಟೆಲ್‌ ಖಿಮ್ಸರ್ ಕೋಟೆಯಲ್ಲಿ ನಡೆಯಿತು. ಕುಟುಂಬಕ್ಕೆ ನಿಕಟವಾಗಿರುವವರು ಮತ್ತು ಸ್ನೇಹಿತರಷ್ಟೇ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

‘ಹಳದಿ’ ಮತ್ತು ‘ಮೆಹೆಂದಿ’ ಕಾರ್ಯಕ್ರಮಗಳು ಬುಧವಾರವೇ ನಡೆದಿವೆ.

ADVERTISEMENT

ಬಿಳಿ ಉಡುಪಿನಲ್ಲಿ ಆಗಮಿಸಿದ ವರನನ್ನು ಸ್ಮೃತಿ ಇರಾನಿ, ಅವರ ಪತಿ ಜುಬಿನ್ ಇರಾನಿ, ರಾಜಸ್ಥಾನದ ಮಾಜಿ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಮತ್ತು ವಧುವಿನ ಕುಟುಂಬದ ಸದಸ್ಯರು ಸ್ವಾಗತಿಸಿದರು.

ಎರಡೂ ಕಡೆಯಿಂದ ಸುಮಾರು 50 ಅತಿಥಿಗಳನ್ನು ಮಾತ್ರವೇ ಆಹ್ವಾನಿಸಲಾಗಿತ್ತು ಎಂದು ಗೊತ್ತಾಗಿದೆ.

ಹೋಟೆಲ್‌ ಸುತ್ತಲೂ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಅರ್ಜುನ್ ಭಲ್ಲಾ ಮತ್ತು ಶಾನೆಲ್ಲೆ ಕಾನೂನು ಪದವೀಧರರಾಗಿದ್ದು 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಖಿಮ್ಸರ್‌ ಹೋಟೆಲ್‌ ಮಾಜಿ ಸಚಿವ ಗಜೇಂದ್ರ ಸಿಂಗ್ ಅವರ ಒಡೆತನದ್ದಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.