ADVERTISEMENT

ಮಹದಾಯಿಗೆ ಒಪ್ಪಿಗೆ: ರಾಜೀನಾಮೆ ನೀಡುವುದಾಗಿ ಸಚಿವ ಶ್ರೀಪಾದ ನಾಯಕ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 7:19 IST
Last Updated 1 ಜನವರಿ 2023, 7:19 IST
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ (ಸಂಗ್ರಹ ಚಿತ್ರ)
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ (ಸಂಗ್ರಹ ಚಿತ್ರ)   

ಪಣಜಿ: ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿ ಕರ್ನಾಟಕದ ವಿಸ್ತೃತ ಯೋಜನಾ ವರದಿಗೆ(ಡಿಪಿಆರ್) ಅನುಮೋದನೆ ನೀಡಿರುವ ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವರಾದ, ಉತ್ತರ ಗೋವಾದ ಸಂಸದ ಶ್ರೀಪಾದ್ ನಾಯಕ್ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ‌

ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಜನರ ಹಿತಾಸಕ್ತಿಯ ವಿಷಯ ಬಂದಾಗ ರಾಜಕೀಯವು ಎರಡನೇ ಆದ್ಯತೆ ಆಗುತ್ತದೆ. ನಾನು ಜನರ ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಅಗತ್ಯಬಿದ್ದರೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ಡಿಪಿಆರ್ ಅನ್ನು ಅನುಮೋದಿಸುವ ನಿರ್ಧಾರವು ಏಕಪಕ್ಷೀಯವಾಗಿದೆ. ಈ ಕುರಿತು ನಿರ್ಧರಿಸುವ ಮುನ್ನ ಸಿಡಬ್ಲ್ಯುಸಿ ಗೋವಾ ಸರ್ಕಾರದ ಅಭಿಪ್ರಾಯವನ್ನೂ ತೆಗೆದುಕೊಳ್ಳಬೇಕಿತ್ತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಈ ವಿಷಯವು ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವಾಗಲೇ ಸಿಡಬ್ಲ್ಯುಸಿಯು ಅನುಮೋದನೆ ನೀಡುವ ನಿರ್ಧಾರ ತೆಗೆದುಕೊಂಡಿದ್ದು ತಪ್ಪು. ಮಹದಾಯಿ ನದಿಯು ಗೋವಾದ ಜೀವನಾಡಿಯಾಗಿದ್ದು, ಇಲ್ಲಿನ ಜನರಷ್ಟೇ ಅಲ್ಲ ವನ್ಯಜೀವಿ, ಸಸ್ಯಸಂಪತ್ತು ಮಹದಾಯಿಯ ನೀರನ್ನು ಅವಲಂಬಿಸಿದೆ. ಸಿಡಬ್ಲ್ಯುಸಿಯ ನಿರ್ಧಾರದಿಂದಾಗಿ ಗೋವಾಕ್ಕೆ ಅನ್ಯಾಯವಾಗಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.