ADVERTISEMENT

ಲಡಾಖ್‌ನಲ್ಲಿ 49 ಜನರಿಗೆ ಕೋವಿಡ್; 2022ರಲ್ಲಿ ಒಂದೇ ದಿನ ವರದಿಯಾದ ಗರಿಷ್ಠ ಪ್ರಕರಣ

ಪಿಟಿಐ
Published 4 ಜುಲೈ 2022, 9:52 IST
Last Updated 4 ಜುಲೈ 2022, 9:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲೇಹ್‌: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಹೊಸದಾಗಿ 49 ಜನರಿಗೆ ಕೋವಿಡ್‌–19 ದೃಢಪಟ್ಟಿದೆ. ಎಲ್ಲ ಪ್ರಕರಣಗಳು ರಾಜಧಾನಿ ಲೇಹ್‌ನಲ್ಲಿಯೇ ಪತ್ತೆಯಾಗಿವೆ ಎಂದುಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಇವು ಈ ವರ್ಷ (2022ರಲ್ಲಿ) ಇಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳಾಗಿವೆ.

ಇದರೊಂದಿಗೆ ಲಡಾಖ್‌ನಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ28,513ಕ್ಕೆ ಏರಿದೆ. ಈ ಪೈಕಿ 28,138 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 228 ಸೋಂಕಿತರು ಮೃತಪಟ್ಟಿದ್ದಾರೆ. ಲೇಹ್‌ನಲ್ಲಿ 168 ಮತ್ತು ಕಾರ್ಗಿಲ್‌ನಲ್ಲಿ 60 ಸಾವಿನ ಪ್ರಕರಣಗಳು ವರದಿಯಾಗಿವೆ.

ADVERTISEMENT

ಸದ್ಯ 150 ಪ್ರಕರಣಗಳು ಸಕ್ರಿಯವಾಗಿವೆ. ಎಲ್ಲವೂ ಲೇಹ್‌ನಲ್ಲಿಯೇ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.