ADVERTISEMENT

ಇರಾನ್‌ ನೆಲೆ ಮೇಲೆ ರಾಕೆಟ್ ದಾಳಿ; ಎಚ್ಚರಿಕೆ ನೀಡಿದ ಅಮೆರಿಕ

ಏಜೆನ್ಸೀಸ್
Published 4 ಮಾರ್ಚ್ 2021, 7:11 IST
Last Updated 4 ಮಾರ್ಚ್ 2021, 7:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌:ಅಮೆರಿಕ ನೇತೃತ್ವದ ಮಿತ್ರ ಪಡೆಗಳು ಬುಧವಾರ ಪಶ್ಚಿಮ ಇರಾಕ್‌ ಪ್ರದೇಶದಲ್ಲಿನ ಸೇನಾ ನೆಲೆಗಳ ಮೇಲೆ ನಡೆಸಿದ ದಾಳಿಯು,ಮತ್ತೊಂದು ಸುತ್ತಿನ ಹಿಂಸಾಚಾರದ ಪ್ರಚೋದನೆಗೆ ದಾರಿ ಮಾಡಕೊಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಕನಿಷ್ಠ 10 ರಾಕೆಟ್‌ಗಳು ವಾಯುನೆಲೆಗೆ ಅಪ್ಪಳಿಸಿವೆ. ಈ ದಾಳಿಯಲ್ಲಿ ಅಮೆರಿಕದ ಗುತ್ತಿಗೆದಾರರೊಬ್ಬರು ಮೃತಪಟ್ಟಿದ್ದಾರೆ. ‌ಕಳೆದ ವಾರ ಇರಾಕ್-ಸಿರಿಯಾ ಗಡಿಯಲ್ಲಿ ಅಮೆರಿಕ ಇರಾನ್- ಅಲೈನ್ಡ್‌ ಮಿಲಿಟಿಯಾ ಮೇಲೆ ಬಾಂಬ್ ಸ್ಫೋಟಿಸಿದ ನಂತರ ನಡೆದ ಮೊದಲ ದಾಳಿ ಇದಾಗಿದೆ.

ಈ ಘಟನೆಯಿಂದ ಇರಾಕ್‌ನಲ್ಲಿ, ಇರಾನ್‌ ಬೆಂಬಲಿತ ಮಿಲಿಟಿಯಾ ಗುಂಪುಗಳು ಹೆಚ್ಚಿನ ದಾಳಿ ಮತ್ತು ತೀವ್ರವಾದ ಉದ್ವಿಗ್ನತೆ ಉದ್ಭವಿಸಲು ಕಾರಣವಾಗಬಹುದು. ಇದು 2015ರ ಪರಮಾಣು ಒಪ್ಪಂದದ ಬಗ್ಗೆ ಇರಾನ್ ಜೊತೆ ಮಾತುಕತೆಗಳನ್ನು ಆರಂಭಿಸಲು ಬೈಡನ್ ಆಡಳಿತಕ್ಕೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ.

ADVERTISEMENT

ಇರಾಕ್‌ನಲ್ಲಿ ನಡೆದಿರುವ ರಾಕೆಟ್‌ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ‘ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗಿದೆ. ನಾವು ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೇವೆ‘ ಎಂದು ಹೇಳಿದರು. ‘ಅದೃಷ್ಟವಶಾತ್ ಈ ದಾಳಿಯಿಂದ ಯಾರೂ ಸತ್ತಿಲ್ಲ. ಒಬ್ಬ ಗುತ್ತಿಗೆದಾರ ಸಾವನ್ನಪ್ಪಿದ್ದು, ಇದು ಹೃದಯಾಘಾತದಿಂದ ಆಗಿದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.