ADVERTISEMENT

ಉನ್ನಾವೊ: ಸಂತ್ರಸ್ತೆ ತಂದೆ ಹತ್ಯೆ ಪ್ರಕರಣ ‌ತೀರ್ಪು ಮುಂದಕ್ಕೆ

ಪಿಟಿಐ
Published 29 ಫೆಬ್ರುವರಿ 2020, 19:18 IST
Last Updated 29 ಫೆಬ್ರುವರಿ 2020, 19:18 IST
   

ನವದೆಹಲಿ: ಉತ್ತರ ಪ್ರದೇಶದ ಉನ್ನಾವೊದಲ್ಲಿಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಕುಲ್‌ದೀಪ್‌ ಸಿಂಗ್‌ ಸೆಂಗರ್‌ನಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯ ತಂದೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ತೀರ್ಪನ್ನು ಬುಧವಾರಕ್ಕೆ ಮುಂದೂಡಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ತಂದೆ 2018 ಏಪ್ರಿಲ್ 9 ರಂದು ಸಾವನ್ನಪ್ಪಿದ್ದರು.

ಸಂತ್ರಸ್ತೆಯ ತಾಯಿ, ಸಹೋದರಿ, ಮಾವ ಮತ್ತು ತಂದೆಯ ಸಹೋದ್ಯೋಗಿಗಳ ಹೇಳಿಕೆಗಳನ್ನು ನ್ಯಾಯಾಲಯವು ದಾಖಲಿಸಿಕೊಂಡಿತ್ತು.

ADVERTISEMENT

2018 ಏಪ್ರಿಲ್‌ 3ರಂದು ಶಶಿ ಪ್ರತಾಪ್‌ ಸಿಂಗ್‌ ಎಂಬಾತನ ಜೊತೆ ಸಂತ್ರಸ್ತೆಯ ತಂದೆಗೆ ವಾಗ್ವಾದ ನಡೆದಿತ್ತು ಎಂದು ಸಿಬಿಐ ಹೇಳಿತ್ತು. ಬಳಿಕ ಪೊಲೀಸರು ಸಂತ್ರಸ್ತೆಯ ತಂದೆಯನ್ನು ಬಂಧಿಸಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.