ADVERTISEMENT

ಆಧಾರ್ ಕಾರ್ಡ್‌ನಲ್ಲಿ ವಿಚಿತ್ರ ಹೆಸರು: ಶಾಲೆ ದಾಖಲಾತಿಗೆ ಆಡಳಿತ ಮಂಡಳಿ ನಕಾರ

ಪಿಟಿಐ
Published 4 ಏಪ್ರಿಲ್ 2022, 15:23 IST
Last Updated 4 ಏಪ್ರಿಲ್ 2022, 15:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬದಾಯು, ಉತ್ತರ ಪ್ರದೇಶ: ಮಗುವಿನ ಆಧಾರ್ ಕಾರ್ಡ್‌ನಲ್ಲಿ ಇರುವ ಹೆಸರು ಗಮನಿಸಿದ ಉತ್ತರ ಪ್ರದೇಶದ ಶಾಲೆಯೊಂದು ದಾಖಲಾತಿ ಮಾಡಿಕೊಳ್ಳಲು ನಿರಾಕರಿಸಿದ ಪ್ರಕರಣ ವರದಿಯಾಗಿದೆ.

ಮಗುವನ್ನು ಶಾಲೆಗೆ ದಾಖಲಿಸಿಕೊಳ್ಳಲು ಹೆಸರು ಗಮನಿಸಿದಾಗ, ಆಧಾರ್ ಕಾರ್ಡ್‌ನಲ್ಲಿ ಹೆಸರು ಇರುವ ಜಾಗದಲ್ಲಿ ‘ಮಧು ಕಾ ಪಾಂಚ್ವಾ ಬಚ್ಚಾ‘ ಎಂದೂ, ಇಂಗ್ಲಿಷ್‌ನಲ್ಲಿ ‘ಬೇಬಿ ಫೈವ್ ಆಫ್ ಮಧು‘ ಎಂದು ಬರೆಯಲಾಗಿರುವ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಆಧಾರ್ ನಂಬರ್ ಕೂಡ ಕಾರ್ಡ್‌ನಲ್ಲಿ ಇರಲಿಲ್ಲ.

ADVERTISEMENT

ರಾಯ್ಪುರ ಗ್ರಾಮದ ನಿವಾಸಿ ದಿನೇಶ್ ಎಂಬವರು, ತಮ್ಮ ಮಗಳನ್ನು ಶಾಲೆಗೆ ಸೇರಿಸಲು ಬಂದಿರುವ ವೇಳೆ ಆಧಾರ್ ಹೆಸರಿನ ಗೊಂದಲ ಬೆಳಕಿಗೆ ಬಂದಿದೆ.

ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿ, ಹೊಸದಾಗಿ ತಂದುಕೊಡುವಂತೆ ಶಾಲೆಯ ಆಡಳಿತ ಮಂಡಳಿ ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್, ಆಧಾರ್ ಕಾರ್ಡ್ ಅನ್ನು ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್‌ನಲ್ಲಿ ತಯಾರಿಸಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ನಿರ್ಲಕ್ಷ್ಯದಿಂದ ಆಧಾರ್ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.