ಪ್ರಾತಿನಿಧಿಕ ಚಿತ್ರ
ಲಖನೌ: ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ ಹತ್ಯೆಯನ್ನು ವಿರೋಧಿಸಿ ಲಖನೌದ ಹಳೆ ನಗರ ಪ್ರದೇಶದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ಲೆಬನಾನ್‌ನಲ್ಲಿ ನಡೆಸಿದ ವಾಯುದಾಳಿಯಲ್ಲಿ ನಸ್ರಲ್ಲಾನನ್ನು ಇಸ್ರೇಲ್ ಪಡೆಗಳು ಹತ್ಯೆಗೈದಿದ್ದವು.
ಶಿಯಾ ಧರ್ಮಗುರು ಮೌಲಾನಾ ಕಲ್ಬೆ ಜವಾದ್ ಪ್ರತಿಭಟನೆಗೆ ಕರೆ ನೀಡಿದ್ದು, ನಸ್ರಲ್ಲಾ ನಿಧನಕ್ಕೆ ಭಾನುವಾರದಿಂದ ಮೂರು ದಿನಗಳ ಶೋಕಾಚರಣೆ ನಡೆಸಬೇಕು, ಮನೆಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಬೇಕು ಹಾಗೂ ಅಂಗಡಿಗಳನ್ನು ಮುಚ್ಚಿ ಎಂದು ಕರೆ ನೀಡಿದ್ದಾರೆ.
ಪ್ರತಿಭಟನಾಕಾರರು ಕೈಯಲ್ಲಿ ಕಪ್ಪು ಬಾವುಟ, ಪಂಜು, ಮತ್ತು ನಸ್ರಲ್ಲಾ ಅವರ ಭಾವಚಿತ್ರಗಳನ್ನು ಹಿಡಿದು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.