ADVERTISEMENT

ಅಫ್ಗನ್‌ ಬಾಲಕಿ ಕಳಿಸಿದ್ದ ಕಾಬೂಲ್‌ ನದಿ ನೀರನ್ನು ರಾಮ ಮಂದಿರಕ್ಕೆ ಅರ್ಪಿಸಿದ ಯೋಗಿ

ಪಿಟಿಐ
Published 31 ಅಕ್ಟೋಬರ್ 2021, 16:00 IST
Last Updated 31 ಅಕ್ಟೋಬರ್ 2021, 16:00 IST
   

ಅಯೋಧ್ಯೆ: ಅಫ್ಗಾನಿಸ್ತಾನದ ಬಾಲಕಿಯೊಬ್ಬಳು ರಾಮಜನ್ಮಭೂಮಿಗಾಗಿ ಕಳುಹಿಸಿಕೊಟ್ಟಿದ್ದ ಕಾಬೂಲ್ ನದಿ ನೀರನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿ ಅರ್ಪಣೆ ಮಾಡಿದರು.

ಈ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್‌, ‘ಆಡಳಿತವನ್ನು ತಾಲಿಬಾನ್‌ಗಳು ವಶಕ್ಕೆ ಪಡೆದುಕೊಂಡಿರುವ ಅಫ್ಘಾನಿಸ್ತಾನದಲ್ಲಿನ ಈ ಪರಿಸ್ಥಿತಿಯಲ್ಲೂ ಬಾಲಕಿ ಕಾಬೂಲ್ ನದಿ ನೀರನ್ನು ರಾಮ ಜನ್ಮಭೂಮಿಗಾಗಿ ಕಳುಹಿಸಿದ್ದಾಳೆ. ಆಕೆಯ ಪರವಾಗಿ ನಾನು ನೀರನ್ನು ಅರ್ಪಿಸುವ ಈ ಕಾರ್ಯ ಮಾಡಲು ಉತ್ಸುಕನಾಗಿದ್ದೇನೆ,‘ ಎಂದು ತಿಳಿಸಿದರು.

ಬಾಲಕಿಯು ಕಾಬೂಲ್‌ ನದಿ ನೀರನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಳು ಎಂದು ಅವರು ತಿಳಿಸಿದರು.

ADVERTISEMENT

ಕಾಬೂಲ್‌ ನದಿ ನೀರಿನ ಜೊತೆಗೆ ಅವರು ಗಂಗೆಯ ನೀರನ್ನೂ ರಾಮ ಜನ್ಮ ಭೂಮಿಯ ಮಂದಿ ನಿರ್ಮಾಣ ಸ್ಥಳಕ್ಕೆ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.