ADVERTISEMENT

ಜಿನ್ನಾ ಅನುಯಾಯಿಗಳು ದುಷ್ಕೃತ್ಯ ಎಸಗಲು ಅವಕಾಶ ಸೃಷ್ಟಿಸಬೇಕೇ? - ಯೋಗಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 20:30 IST
Last Updated 25 ನವೆಂಬರ್ 2021, 20:30 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ:‘ರಾಜ್ಯದಲ್ಲಿ ಬೆಳೆಯುವ ಕಬ್ಬಿನ ಸಿಹಿಯನ್ನು ಹೆಚ್ಚಿಸಬೇಕೇ ಅಥವಾ ಪಾಕಿಸ್ತಾನ ಸ್ಥಾಪಕ ಮೊಹಮ್ಮದ್‌ ಆಲಿ ಜಿನ್ನಾ ಅವರ ಅನುಯಾಯಿಗಳು ರಾಜ್ಯದಲ್ಲಿ ದುಷ್ಕೃತ್ಯ ಎಸಗಲು ಅವಕಾಶ ಸೃಷ್ಟಿಸಬೇಕೇ ಎಂಬುದನ್ನು ದೇಶವು ನಿರ್ಧರಿಸುವ ಸಮಯ ಬಂದಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಮಹಾತ್ಮ ಗಾಂಧಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಜವಾಹರಲಾಲ್‌ ನೆಹರೂ, ಜಿನ್ನಾ ಮುಂತಾದವರು ದೇಶವು ಸ್ವಾತಂತ್ರ್ಯ ಪಡೆಯಲು ಕಾರಣ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಇತ್ತೀಚೆಗೆ ಹೇಳಿದ್ದರು. ಅದನ್ನು ಉಲ್ಲೇಖಿಸಿ ಯೋಗಿ ಅವರು ಅಖಿಲೇಶ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT