ADVERTISEMENT

ಆನ್‌ಲೈನ್‌ ಗೇಮಿಂಗ್‌ ಮೂಲಕ ಮತಾಂತರ: ಪ್ರಮುಖ ಆರೋಪಿ ಬಂಧನ

ಪಿಟಿಐ
Published 11 ಜೂನ್ 2023, 16:27 IST
Last Updated 11 ಜೂನ್ 2023, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಥಾಣೆ:‌ ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ಮೂಲಕ ಯುವಜನರನ್ನು ಧಾರ್ಮಿಕ ಮತಾಂತರ ಮಾಡುವ ಜಾಲದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಶಹನವಾಜ್ ಖಾನ್‌ ಅಲಿಯಾಸ್‌ ಬಡ್ಡೂ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸರು ರಾಯಗಢ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ವಿಚಾರಣೆಗೆಂದು ಖಾನ್‌ ಅವರನ್ನು ಮುಂಬ್ರಾಗೆ ಕರೆದೊಯ್ಯಲಾಗಿದೆ, ಆದರೆ ಪ್ರಕರಣದ ಬಗ್ಗೆ ವಿವರವಾಗಿ ಹೇಳಲು ಅವರು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಜಿಯಾಬಾದ್ ಮೂಲದ ವ್ಯಕ್ತಿಯೊಬ್ಬರು ಕಳೆದ ತಿಂಗಳು ‘ತಮ್ಮ ಮಗನನ್ನು ಕಾನೂನಿಗೆ ವಿರುದ್ಧವಾಗಿ ಮತಾಂತರ ಮಾಡಲಾಗಿದೆ’ ಎಂದು  ಮಸೀದಿಯ ಧರ್ಮಗುರು ಮತ್ತು ಖಾನ್‌ ವಿರುದ್ಧ ದೂರು ದಾಖಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.