ADVERTISEMENT

ಉತ್ತರ ಪ್ರದೇಶ | ಸಂಬಂಧ ಶಂಕೆ: ಅನ್ಯನೊಟ್ಟಿಗೆ ಪತ್ನಿಗೆ ವಿವಾಹ ಮಾಡಿಸಿದ ವ್ಯಕ್ತಿ

ಒತ್ತಾಯಪೂರ್ವಕವಾಗಿ ವಿವಾಹ ಮಾಡಿಸಿರುವುದಾಗಿ ಗೊಂಡಾದಲ್ಲಿ ಆರೋಪಿಸಿದ ಮಹಿಳೆ

ಪಿಟಿಐ
Published 21 ಜೂನ್ 2025, 14:15 IST
Last Updated 21 ಜೂನ್ 2025, 14:15 IST
   

ಗೊಂಡಾ (ಉತ್ತರಪ್ರದೇಶ): ಪತ್ನಿಗೆ ಬೇರೊಬ್ಬನ ಜೊತೆ ಸಂಬಂಧವಿದೆಯೆಂದು ಶಂಕಿಸಿದ ಪತಿ ಆತನ ಜೊತೆ ವಿವಾಹ ಮಾಡಿಸಿರುವ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ.

ಹರಿಶ್ಚಂದ್ರ(42) ಅವರು ತಮ್ಮ ಪತ್ನಿ ಕರಿಷ್ಮಾ(36) ಮತ್ತು ಶಿವರಾಜ್‌ ಚೌಹಾಣ್‌ ಅವರ ವಿವಾಹವನ್ನು ಗುರುವಾರ ಸಂಜೆ ದೇವಾಲಯವೊಂದರಲ್ಲಿ ಮಾಡಿಸಿದ್ದಾರೆ.

‘ನನಗೆ ಶಿವರಾಜ್‌ ಜೊತೆ ಸಂಬಂಧವಿರಲಿಲ್ಲ. ಒತ್ತಾಯಪೂರ್ವಕವಾಗಿ ಆತನ ಜೊತೆ ವಿವಾಹ ಮಾಡಿಸಿದ್ದಾರೆ’ ಎಂದು ಕರಿಷ್ಮಾ ಆರೋಪಿಸಿದ್ದಾರೆ. 

ADVERTISEMENT

‘ನನ್ನ ಪತ್ನಿಯ ಜೊತೆ ಜೀವನ ನಡೆಸಲು ನನಗೆ ಇಷ್ಟವಿಲ್ಲ. ಆಕೆ ನನಗೆ ವಿಷವುಣಿಸಲು ಮತ್ತು ಮಗನಿಗೆ ಮಾದಕ ವಸ್ತುಗಳನ್ನು ನೀಡಲು ಯತ್ನಿಸಿದ್ದಳು’ ಎಂದು ಪತಿ ಹರಿಶ್ಚಂದ್ರ ಅವರು ಆರೋಪಿಸಿದ್ದಾರೆ. 

ಕರಿಷ್ಮಾ ಮತ್ತು ಶಿವರಾಜ್ ಜೊತೆಗಿದ್ದಾಗ ಸಿಕ್ಕಿಬಿದ್ದಿದ್ದರು ಎಂದು ಹರಿಶ್ಚಂದ್ರ ಆರೋಪಿಸಿದ್ದ ಕಾರಣ ಮಂಗಳವಾರ ಸಮುದಾಯದವರು ಮಾತುಕತೆ ನಡೆಸಿದ್ದರು. ಆದರೂ ಪರಿಹಾರ ಸಿಕ್ಕಿರಲಿಲ್ಲ.

ಹರಿಶ್ಚಂದ್ರ ಮತ್ತು ಕರಿಷ್ಮಾ ಅವರಿಗೆ 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಶಿವರಾಜ್‌ ಜತೆ ವಿವಾಹವಾದ ಬಳಿಕ ಮಗಳನ್ನು ಕರಿಷ್ಮಾ ಮತ್ತು ಮಗನನ್ನು ಹರಿಶ್ಚಂದ್ರ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.