ADVERTISEMENT

ಮೊರಾದಾಬಾದ್‌: ರೀಲ್ಸ್‌ ಮಾಡಲು ಹೋಗಿ ಹಾವು ಕಡಿತ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:01 IST
Last Updated 16 ಜೂನ್ 2025, 14:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಪಿಟಿಐ ಚಿತ್ರ

ಮೊರಾದಾಬಾದ್‌ (ಉತ್ತರ ಪ್ರದೆಶ): ಹಾವಿಗೆ ಮುತ್ತಿಕ್ಕುವ ರೀಲ್ಸ್‌ ಮಾಡುವ ಸಂದರ್ಭದಲ್ಲಿ ವ್ಯಕ್ತಿಯ ನಾಲಿಗೆಗೆ ಹಾವು ಕಚ್ಚಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹೈಬತ್‌ಪುರದಲ್ಲಿ ನಡೆದಿದೆ. 

ADVERTISEMENT

ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ರೈತ ಜಿತೇಂದ್ರ ಕುಮಾರ್‌ (50) ಅವರು ಹಾವನ್ನು ಹಿಡಿದು, ಕುತ್ತಿಗೆಗೆ ಸುತ್ತಿಕೊಂಡು ನಿಧಾನವಾಗಿ ಅದರ ತಲೆಯನ್ನು ತಮ್ಮ ಬಾಯಿಯ ಬಳಿಗೆ ತಂದು ಮುತ್ತಿಕ್ಕಲು ಪ್ರಯತ್ನಿಸಿದರು. ಆಗ ಹಾವು ಕುಮಾರ್‌ ಅವರ ನಾಲಿಗೆಗೆ ಕಚ್ಚಿತು. ಈ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಹಾವು ಕಚ್ಚಿದ ತಕ್ಷಣವೇ ಅವರನ್ನು ಮೊರಾದಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕುಮಾರ್‌ ಅವರ ಸ್ಥಿತಿ ಗಂಭೀರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.