
ಪಿಟಿಐ
ಲಖನೌ:ಉತ್ತರ ಪ್ರದೇಶದ ನೂತನ ಜೈಲು ಕೈಪಿಡಿ ಪ್ರಕಾರ, ವಿವಾಹಿತ ಮಹಿಳಾ ಕೈದಿಗಳು ಮಂಗಳಸೂತ್ರವನ್ನು ಧರಿಸಲು ಮತ್ತು ಕರ್ವಾಚೌತ್ ಮತ್ತು ತೀಜ್‌ನಂಥ ಹಬ್ಬಗಳನ್ನು ಆಚರಿಸಲು ಶೀಘ್ರವೇ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
1994ರ ವಸಹಾತುಶಾಹಿ ಕಾನೂನಿಗೆ ತಿದ್ದುಪಡಿ ತಂದ ನೂತನ ಜೈಲು ಕೈಪಿಡಿಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ.ಇದಕ್ಕೂ ಮೊದಲು ಬಳೆ, ಮೂಗುತಿ, ಕಾಲ್ಗೆಜ್ಜೆ ಧರಿಸಲು ಮಾತ್ರ ಅವಕಾಶ ನೀಡಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.