ADVERTISEMENT

ಮಳೆ ಸಂಬಂಧಿತ ಅವಘಡ | ಉತ್ತರ ಪ್ರದೇಶದಲ್ಲಿ ಎರಡು ದಿನಗಳಲ್ಲಿ 54 ಮಂದಿ ಸಾವು

ಪಿಟಿಐ
Published 12 ಜುಲೈ 2024, 18:48 IST
Last Updated 12 ಜುಲೈ 2024, 18:48 IST
<div class="paragraphs"><p>ಶಹಜಹಾನ್‌ಪುರದಲ್ಲಿ ಜಲಾವೃತ ಪ್ರದೇಶದಿಂದ ನಿವಾಸಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕಾರ್ಯಾಚರಣೆ ನಡೆಸುತ್ತಿದ ಸೇನಾ ಸಿಬ್ಬಂದಿ – ಪಿಟಿಐ ಚಿತ್ರ&nbsp;</p></div>

ಶಹಜಹಾನ್‌ಪುರದಲ್ಲಿ ಜಲಾವೃತ ಪ್ರದೇಶದಿಂದ ನಿವಾಸಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕಾರ್ಯಾಚರಣೆ ನಡೆಸುತ್ತಿದ ಸೇನಾ ಸಿಬ್ಬಂದಿ – ಪಿಟಿಐ ಚಿತ್ರ 

   

ಲಖನೌ: ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿತ ಕಾರಣಗಳಿಂದಾಗಿ ಎರಡು ದಿನದಲ್ಲಿ 54 ಮಂದಿ ಮೃತಪಟ್ಟಿ ರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸಿಡಿಲು, ಹಾವು ಕಡಿತ ಹಾಗೂ ಮಳೆ ನೀರಿನಲ್ಲಿ ಕೊಚ್ಚಿ ಹೋಗುವುದು ಸೇರಿದಂತೆ ಮಳೆ ಸಂಬಂಧಿತ ಕಾರಣಗ ಳಿಂದಾಗಿ ಬುಧವಾರ ಹಾಗೂ ಗುರುವಾರ ಒಟ್ಟು 54 ಮಂದಿ ಆಕಸ್ಮಿಕವಾಗಿ
ಸಾವಿಗೀಡಾಗಿದ್ದಾರೆ.

ADVERTISEMENT

ಪ್ರತಾಪಗಢ ಜಿಲ್ಲೆಯಲ್ಲಿ ಸಿಡಿಲಿಗೆ ಬುಧವಾರ ಒಂದೇ ದಿನ 12 ಮಂದಿ ಬಲಿಯಾಗಿದ್ದಾರೆ. ಸುಲ್ತಾನ್‌ಪುರ ದಲ್ಲಿ 7 ಮಂದಿ, ಚಂದೌಲಿಯಲ್ಲಿ 6, ಪ್ರಯಾಗ್‌ರಾಜ್‌ನಲ್ಲಿ 4 ಮಂದಿ, ಹಮೀರ್‌ಪುರದಲ್ಲಿ ಇಬ್ಬರು ಹಾಗೂ ಉನ್ನಾವೊ, ಅಮೇಠಿ, ಎಟವಾ, ಸೋನ್‌ಭದ್ರ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿರುವು ದಾಗಿ ಮಾಹಿತಿ ನೀಡಿದ್ದಾರೆ. ಪ್ರತಾಪಗಢ ಹಾಗೂ ಫತೇಪುರ ಜಿಲ್ಲೆಯಲ್ಲಿ ಗುರುವಾರ ಸಿಡಿಲಿಗೆ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಫತೇಪುರ್‌ ಹಾಗೂ ಪ್ರತಾಪ್‌ಗಢದಲ್ಲಿ ಮೂವರು, ಎಟಾದಲ್ಲಿ ಇಬ್ಬರು ಹಾಗೂ ಬಾಂದಾ ಜಿಲ್ಲೆಯಲ್ಲಿ ಒಬ್ಬ ಮಳೆ ನೀರಿನಲ್ಲಿ ಮುಳುಗಿಸಾವಿಗೀಡಾಗಿದ್ದಾರೆ. ಹಾವು ಕಡಿತ ದಿಂದಾಗಿ ಅಮೇಠಿ ಹಾಗೂ ಸೋನ್‌ಭದ್ರ ಜಿಲ್ಲೆಯಲ್ಲಿ ಬುಧವಾರ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಗುರುವಾರ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಸಂತ್ರಸ್ತರಿಗೆ ನೆರವು ನೀಡಲುಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ
ವೈದ್ಯಕೀಯ ತಂಡ ಮತ್ತು ಜನರ ರಕ್ಷಣೆಗೆ 750ಕ್ಕೂ ಹೆಚ್ಚು ದೋಣಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಎಲ್ಲ ಸಾವುಗಳು ಬುಧವಾರ ಸಂಜೆ 7 ರಿಂದ ಗುರುವಾರ ಸಂಜೆ 7ರ ನಡುವೆ ವರದಿಯಾಗಿವೆ. ಸಿಡಿಲು ಬಡಿದು ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಕಚೇರಿ ಹೇಳಿದೆ.

ಪ್ರತಾಪಗಢ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಸಾವು ದಾಖಲಾಗಿದ್ದು, ಬುಧವಾರ ಸಿಡಿಲು ಬಡಿದು 12 ಮಂದಿ ಜೀವ ಕಳೆದುಕೊಂಡಿದ್ದಾರೆ. ಜತೆಗೆ ಅದೇ ದಿನ ಸುಲ್ತಾನಪುರದಲ್ಲಿ ಸಿಡಿಲು ಬಡಿತಕ್ಕೆ ಏಳು ಮಂದಿ ಹಾಗೂ ಚಂದೌಲಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಪ್ರಯಾಗರಾಜ್ (ಬುಧವಾರ) ಮತ್ತು ಫತೇಪುರ್‌ನಲ್ಲಿ (ಗುರುವಾರ) ತಲಾ ನಾಲ್ವರು, ಹಮೀರ್‌ಪುರದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಚೇರಿ ತಿಳಿಸಿದೆ.

ಬುಧವಾರ ಉನ್ನಾವೊ, ಅಮೇಠಿ, ಇಟಾವಾ, ಸೋನ್‌ಭದ್ರ, ಫತೇಪುರ್ ಮತ್ತು ಪ್ರತಾಪಗಢದಲ್ಲಿ ತಲಾ ಒಬ್ಬರು ಹಾಗೂ ಗುರುವಾರ ಪ್ರತಾಪಗಢ ಮತ್ತು ಫತೇಪುರದಲ್ಲಿ ತಲಾ ಒಬ್ಬರು ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಒಂಬತ್ತು ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಮೇಠಿ ಮತ್ತು ಸೋನ್‌ಭದ್ರದಲ್ಲಿ ತಲಾ ಒಬ್ಬರು ಹಾವು ಕಡಿತದಿಂದ ಜೀವ ಕಳೆದುಕೊಂಡಿದ್ದಾರೆ ಎಂದು ಉತ್ತರ ಪ್ರದೇಶ ಪರಿಹಾರ ಆಯುಕ್ತರ ಕಚೇರಿ ತಿಳಿಸಿದೆ.

ಉಕ್ಕಿದ ನದಿಗಳು: ಹಲವೆಡೆ ರಸ್ತೆ, ರೈಲು ಸಂಚಾರ ಸ್ಥಗಿತ

ಪ್ರವಾಹದ ನೀರು ರಸ್ತೆಗಳ ಮೇಲೆ ಹರಿಯುತ್ತಿರುವದರಿಂದ ಪಿಲಿಭಿತ್‌ ಜಿಲ್ಲೆಗಳಲ್ಲೂ ಅನೇಕ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರೈಲು ಹಳಿಗಳು ಜಲಾವೃತಗೊಂಡಿರುವ ಕಾರಣ ಲಖೀಂಪುರ ಖೇರಿ– ಮೈಲಾನಿ ಮಾರ್ಗದಲ್ಲಿ ರೈಲು ಸಂಚಾರವನ್ನು ಬಂದ್‌ ಮಾಡಲಾಗಿದೆ. ಉಕ್ಕಿ ಹರಿಯುತ್ತಿರುವ ಗರ್ರಾ ನದಿ ನೀರು  ಹಾರ್ದೋಯಿ ಜಿಲ್ಲೆಯ ಅನೇಕ ಹಳ್ಳಿಗಳಿಗೂ ನುಗ್ಗಿದೆ. 

ಶಹಜಹಾನ್‌ಪುರ ಜಿಲ್ಲೆಯಲ್ಲಿ ಗರ್ರಾ ನದಿಯ ನೀರು ಸೇತುವೆಯ ಮೇಲೆ ಉಕ್ಕಿ ಹರಿಯುತ್ತಿದ್ದರಿಂದ ಲಖನೌ–ದೆಹಲಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಹಜಹಾನ್‌ಪುರ ಪಟ್ಟಣದ ಅನೇಕ ನಗರಗಳಿಗೂ ನದಿ ನೀರು ನುಗ್ಗಿದ್ದು, ಜಿಲ್ಲಾಡಳಿತವು ಶನಿವಾರದವರೆಗೆ ಶಾಲೆಗಳನ್ನು ಬಂದ್‌ ಮಾಡಿ ಆದೇಶ ಹೊರಡಿಸಿದೆ. 

900ಕ್ಕೂ ಹೆಚ್ಚು ಹಳ್ಳಿಗಳ 18 ಲಕ್ಷ ಜನರಿಗೆ ಸಂಕಷ್ಟ

ನೇಪಾಳದ ಗಡಿ ಭಾಗದಲ್ಲಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ಹೆಚ್ಚಿನ ಭೂಪ್ರದೇಶವು ಜಲಾವೃತಗೊಂಡಿದೆ. ಗ್ರಾಮಗಳಿಗೆ ನೀರು ನುಗ್ಗುತ್ತಿರುವುದರಿಂದ ಜನರು ಸುರಕ್ಷಿತ ಸ್ಥಳಗಳನ್ನು ಅರಸಿ ಹೋಗುತ್ತಿದ್ದಾರೆ ಎಂದು ವರದಿಗಳು ಹೇಳಿವೆ.  

ಲಖೀಂಪುರ ಖೇರಿ ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಭೂಮಿ ಜಲಾವೃತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಲ್ಲಿಯಾ ಮತ್ತು ಮಊ ಜಿಲ್ಲೆಗಳಲ್ಲಿ ಸರಯೂ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗೋರಖ್‌ಪುರದಲ್ಲಿ ಸರಯೂ, ರಾಪ್ತಿ ಹಾಗೂ ಆಮಿ ನದಿಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಆಜಂಗಢ, ಮಊ, ಬಲ್ಲಿಯಾ, ಪಿಲಿಭಿತ್, ಶಹಜಹಾನ್‌ಪುರ, ಕುಶಿನಗರ, ಶ್ರಾವಸ್ತಿ, ಬಲರಾಮ್‌ಪುರ, ಲಖೀಂಪುರ ಖೇರಿ, ಬಾರಾಬಂಕಿ, ಸೀತಾಪುರ, ಗೊಂಡಾ, ಸಿದ್ಧಾರ್ಥ್ ನಗರ, ಮೊರಾದಾಬಾದ್‌, ಬರೈಲಿ ಮತ್ತು ಬಸ್ತಿ ಸೇರಿದಂತೆ ರಾಜ್ಯದ 18 ಜಿಲ್ಲೆಗಳು ಪ್ರವಾಹದಿಂದ ಬಾಧಿತವಾಗಿವೆ. 

ಹಲವೆಡೆ ರಸ್ತೆ, ರೈಲು ಸಂಚಾರ ಸ್ಥಗಿತ

ಪ್ರವಾಹದ ನೀರು ರಸ್ತೆಗಳ ಮೇಲೆ ಹರಿಯುತ್ತಿರುವದರಿಂದ ಪಿಲಿಭಿತ್‌ ಜಿಲ್ಲೆಗಳಲ್ಲೂ ಅನೇಕ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರೈಲು ಹಳಿಗಳು ಜಲಾವೃತಗೊಂಡಿರುವ ಕಾರಣ ಲಖೀಂಪುರ ಖೇರಿ– ಮೈಲಾನಿ ಮಾರ್ಗದಲ್ಲಿ ರೈಲು ಸಂಚಾರವನ್ನು ಬಂದ್‌ ಮಾಡಲಾಗಿದೆ. ಉಕ್ಕಿ ಹರಿಯುತ್ತಿರುವ ಗರ್ರಾ ನದಿ ನೀರು  ಹಾರ್ದೋಯಿ ಜಿಲ್ಲೆಯ ಅನೇಕ ಹಳ್ಳಿಗಳಿಗೂ ನುಗ್ಗಿದೆ. 

ಶಹಜಹಾನ್‌ಪುರ ಜಿಲ್ಲೆಯಲ್ಲಿ ಗರ್ರಾ ನದಿಯ ನೀರು ಸೇತುವೆಯ ಮೇಲೆ ಉಕ್ಕಿ ಹರಿಯುತ್ತಿದ್ದರಿಂದ ಲಖನೌ–ದೆಹಲಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಹಜಹಾನ್‌ಪುರ ಪಟ್ಟಣದ ಅನೇಕ ನಗರಗಳಿಗೂ ನದಿ ನೀರು ನುಗ್ಗಿದ್ದು, ಜಿಲ್ಲಾಡಳಿತವು ಶನಿವಾರದವರೆಗೆ ಶಾಲೆಗಳನ್ನು ಬಂದ್‌ ಮಾಡಿ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.