ADVERTISEMENT

ಉತ್ತರ ಪ್ರದೇಶ | ರಸ್ತೆ ಅಪಘಾತ: ಮದುವೆಗೂ ಮುನ್ನವೇ ಮಸಣ ಸೇರಿದ ವರ

ಪಿಟಿಐ
Published 24 ನವೆಂಬರ್ 2025, 7:03 IST
Last Updated 24 ನವೆಂಬರ್ 2025, 7:03 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ಬಾಗ್ಪತ್ (ಉತ್ತರ ಪ್ರದೇಶ): ಮದುವೆಗೂ ಮುನ್ನ ಶಾಸ್ತ್ರವನ್ನು ಮಾಡಲು ತೆರಳುವಾಗ ವೇಗವಾಗಿ ಬಂದ ಟ್ರಕ್‌ ಗುದ್ದಿದ ಪರಿಣಾಮ ವರ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಫಿಸಿಯೋಥೆರೆಪಿಸ್ಟ್‌ ಆಗಿದ್ದ 25 ವರ್ಷದ ಸುಬೋದ್‌ ಅವರು ಘಟನೆಯಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ಭಾನುವಾರ ರಾತ್ರಿ ವೇಳೆ ಅವರ ಮದುವೆ ಶಾಸ್ತ್ರದಲ್ಲಿ ತೊಡಗಿಕೊಂಡಿದ್ದಾಗಲೇ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ದೆಹಲಿ – ಸಹರನ್‌ಪುರ ರಾಷ್ಟ್ರೀಯ ಹೆದ್ದಾರಿ ಬಳಿ ಚಾದತ್ ಶಾಸ್ತ್ರ ನಡೆಯುತ್ತಿದ್ದ ವೇಳೆ ಸುಬೋದ್‌ ಅವರು ರಸ್ತೆ ಬದಿಯಲ್ಲೇ ವಾಂತಿ ಮಾಡಲಾರಂಭಿಸಿದ್ದಾರೆ. ಆ ವೇಳೆ ದೆಹಲಿ ಕಡೆಯಿಂದ ಬಂದ ಟ್ರಕ್‌ ಅವರಿಗೆ ಗುದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸುಬೋದ್‌ರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ದಾರಿ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಘಟನೆಯ ನಂತರ ಟ್ರಕ್‌ ಚಾಲಕ ಪರಾರಿಯಾಗಿದ್ದು, ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.