ADVERTISEMENT

ಉತ್ತರ ಪ್ರದೇಶ: ಇಬ್ಬರಿಂದ ಮಹಿಳೆ ಅಪಹರಣ, ಅತ್ಯಾಚಾರ

ಪಿಟಿಐ
Published 23 ನವೆಂಬರ್ 2020, 18:48 IST
Last Updated 23 ನವೆಂಬರ್ 2020, 18:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾರಾಬಂಕಿ: ಸಮೀಪದ ಗ್ರಾಮವೊಂದರಲ್ಲಿ ಇಬ್ಬರು, 18 ವರ್ಷದ ಮಹಿಳೆಯನ್ನು ಆಕೆಯ ಮನೆಯಿಂದಲೇ ಅಪಹರಿಸಿ ಅತ್ಯಾಚಾರ ಎಸಗಿರುವ ಕೃತ್ಯ ಶನಿವಾರ ನಡೆದಿದೆ.

ಸೋಮವಾರ ಈ ಕುರಿತು ಮಾಹಿತಿ ನೀಡಿರುವ ಪೊಲೀಸ್‌ ವರಿಷ್ಠಾಧಿಕಾರಿ ಅರವಿಂದ್ ಚತುರ್ವೇದಿ, ಕೃತ್ಯ ನಡೆದಾಗ ಸಂತ್ರಸ್ತೆಯ ಸಹೋದರ ಮತ್ತು ತಂದೆ ಮನೆಯಲ್ಲೇ ಇದ್ದರು. ಆದರೆ, ಏನಾಗುತ್ತಿದೆ ಎಂದು ಅವರಿಗೆ ಗ್ರಹಿಸಲಾಗಿಲ್ಲ ಎಂದರು.

ಇಬ್ಬರು ವ್ಯಕ್ತಿಗಳು ಮಹಿಳೆಯನ್ನು ಹಿಡಿದು ಅನುಚಿತವಾಗಿ ವರ್ತಿಸುತ್ತಿದ್ದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಲುವೆಯೊಂದರ ಸಮೀಪ ಬಿದ್ದಿದ್ದು ಭಾನುವಾರ ಪತ್ತೆಯಾಗಿದೆ.

ADVERTISEMENT

ಮಹಿಳೆಯ ಹೇಳಿಕೆಯನ್ನು ಪಡೆದಿದ್ದು, ಅವರನ್ನು ವೈದ್ಯಕೀಯ ತಪಾಸಣೆ, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎ.ಎಸ್.ಪಿ ಮನೋಜ್ ಪಾಂಡೆ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.