ADVERTISEMENT

ಎಸ್‌ಪಿ ನಾಯಕ ಅಖಿಲೇಶ್‌ ಜತೆ ಮನಸ್ತಾಪ: ಅಜಂ ಖಾನ್‌ ಪಕ್ಷ ತೊರೆಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 3:35 IST
Last Updated 11 ಏಪ್ರಿಲ್ 2022, 3:35 IST
ಅಜಂ ಖಾನ್‌
ಅಜಂ ಖಾನ್‌   

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಜತೆಗಿನ ಮನಸ್ತಾಪದಿಂದಾಗಿ ಪಕ್ಷದಹಿರಿಯ ನಾಯಕ ಅಜಂ ಖಾನ್‌ ಪಕ್ಷ ತೊರೆಯುವ ಸಾಧ್ಯತೆಗಳಿವೆ ಎಂದು ಅವರ ಮಾಧ್ಯಮ ಸಲಹೆಗಾರ ಫಶಹಾತ್‌ ಖಾನ್‌ ತಿಳಿಸಿದ್ದಾರೆ.

ಅಜಂ ಖಾನ್‌ ಅವರು ಮುಂದಿನ ದಿನಗಳಲ್ಲಿ ಎಸ್‌ಪಿ ಪಕ್ಷವನ್ನು ತೊರೆಯಲಿದ್ದು ಹೊಸ ರಾಜಕೀಯ ಪಕ್ಷವನ್ನು ಕಟ್ಟಲ್ಲಿದ್ದಾರೆ ಎಂದು ಫಶಹಾತ್‌ ಖಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಭಾನುವಾರ ತಡ ರಾತ್ರಿಯವರೆಗೂ ಅಜಂ ಖಾನ್ ಬೆಂಬಲಿಗರ ಜೊತೆ ಚರ್ಚೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

2020ರಿಂದ ಜೈಲಿನಲ್ಲಿರುವ ಅಜಂ ಖಾನ್‌ ಅವರನ್ನು ಅಖಿಲೇಶ್‌ ಯಾದವ್‌ ಒಮ್ಮೆ ಮಾತ್ರ ಭೇಟಿ ಮಾಡಿದ್ದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಿಲ್ಲ ಎಂದು ಅಖಿಲೇಶ್‌ ವಿರುದ್ಧ ಫಶಹಾತ್‌ ಖಾನ್ ಆರೋಪಿಸಿದರು.

ADVERTISEMENT

ಹಲವು ಸಲ ಸಮಾಜವಾದಿ ಪಕ್ಷದಿಂದ ಶಾಸಕರಾಗಿ ಅಜಂ ಖಾನ್‌ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಂಪುರ ವಿಧಾನಸಭೆಯಿಂದ ಸ್ಪರ್ಧಿಸಿದ್ದ ಅವರು ಜೈಲಿನಲ್ಲಿ ಇದ್ದುಕೊಂಡು ಜಯಗಳಿಸಿದ್ದರು.

ಭೂ ಕಬಳಿಕೆ,ಭೂ ಮಾಫಿಯಾ ಸೇರಿದಂತೆ ಖಾನ್‌ ವಿರುದ್ಧ ಉತ್ತರಪ್ರದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಾರು ದೂರುಗಳು ದಾಖಲಾಗಿವೆ. ಮಗನ ಜನನ ದಿನಾಂಕದ ನಕಲಿ ಪ್ರಮಾಣಪತ್ರ ಪ್ರಕರಣದಲ್ಲಿ ಪತ್ನಿ ಮತ್ತು ಮಗ ಸೇರಿದಂತೆ ಖಾನ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.

ವಿವಿಧ ನ್ಯಾಯಾಲಯಗಳಲ್ಲಿ ಖಾನ್‌ ವಿರುದ್ಧದ ಭೂ ಕಬಳಿಕೆ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಸದ್ಯ ಅವರು 2020ರಿಂದ ಸೀತಾಪುರ ಜೈಲಿನಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.