ವಿಶ್ವಸಂಸ್ಥೆ: ಉಕ್ರೇನ್ ಅನ್ನು ಸಂಪೂರ್ಣ ನಿರ್ನಾಮ ಮಾಡಿ, ವಿಶ್ವ ನಕ್ಷೆಯಿಂದ ತೆಗೆದುಹಾಕುವ ಉದ್ದೇಶವನ್ನು ರಷ್ಯಾ ಹೊಂದಿದೆ ಎನ್ನುವುದಲ್ಲಿ ಯಾವುದೇ ಸಂದೇಹ ಇಲ್ಲ ಎಂದು ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಶುಕ್ರವಾರ ತಿಳಿಸಿದ್ದಾರೆ.
ಲಿಂಡಾ ಥಾಮಸ್– ಗ್ರೀನ್‌ಫೀಲ್ಡ್ ಅವರು, ‘ಪೂರ್ವ ಉಕ್ರೇನ್ ಪ್ರದೇಶದ ಡೊನೆಟ್‌ಸ್ಕ್ ಮತ್ತು ಲುಹಾನ್‌ಸ್ಕ್ ಹಾಗೂ ದಕ್ಷಿಣದ ಕೆರ್ಸಾನ್ ಮತ್ತು ಝಪೊರಿಝಿಯಾ ಪ್ರದೇಶವನ್ನು ಒಟ್ಟಿಗೆ ಸೇರಿಸಲು ರಷ್ಯಾ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ’ ಎಂದುವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.