ADVERTISEMENT

ಕೋವಿಡ್‌ : ದಾಖಲೆ ಪ್ರಮಾಣದಲ್ಲಿ ಕಡಿಮೆಯಾದ ಅಮೆರಿಕನ್ನರ ಜೀವಿತಾವಧಿ

ಏಜೆನ್ಸೀಸ್
Published 21 ಜುಲೈ 2021, 7:21 IST
Last Updated 21 ಜುಲೈ 2021, 7:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನ್ಯೂಯಾರ್ಕ್‌: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಅಮೆರಿಕದ ಜನರ ಜೀವತಾವಧಿ ಒಂದೂವರೆ ವರ್ಷ ಕಡಿಮೆಯಾಗಿದೆ. ಇದು ವಿಶ್ವದ ಎರಡನೇ ಮಹಾಯುದ್ಧದ ನಂತರ ಆಗಿರುವ ಅತಿ ದೊಡ್ಡ ಕುಸಿತ ಎಂದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಕಪ್ಪುವರ್ಣೀಯಅಮೆರಿಕನ್ನರ ಜೀವಿತಾವಧಿಯಲ್ಲಿಗಣನೀಯಇಳಿಕೆಕಂಡು ಬಂದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಮಾಹಿತಿ ಪ್ರಕಾರ, ‘ಒಂದು ವರ್ಷದವರೆಗಿನ ಜೀವಿತಾವಧಿ ಕಡಿಮೆಯಾಗುವುದಕ್ಕೆ ಮುಖ್ಯವಾಗಿ ಕೋವಿಡ್‌ ಸಾಂಕ್ರಾಮಿಕವೇ ಕಾರಣವಾಗಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ ಒಟ್ಟು ಜೀವಿತಾವಧಿಯ ಶೇ 74ರಷ್ಟು ಕಡಿಮೆಯಾಗಿದೆ.

ADVERTISEMENT

ಕಳೆದ ವರ್ಷ 33 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಶೇ 11ರಷ್ಟು ಮಂದಿ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಅಮೆರಿಕದ ಇತಿಹಾಸದಲ್ಲಿ ಯಾವ ವರ್ಷದಲ್ಲೂ ಇಷ್ಟು ಸಾವುಗಳು ಸಂಭವಿಸಿರಲಿಲ್ಲ ಎಂದು ಸಿಡಿಸಿ ತಿಳಿಸಿದೆ.

1930ರ ನಂತರ, ಬಹುದೊಡ್ಡ ಆರ್ಥಿಕ ಕುಸಿತಗಳು ಸಂಭವಿಸಿದ್ದರೂ, ಹೀಗೆ ಒಂದೇ ವರ್ಷದಲ್ಲಿ ಇಷ್ಟು ಜೀವಿತಾವಧಿ ಕಡಿಮೆಯಾದ ದಾಖಲೆ ಈ ಮೊದಲು ಇರಲಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.