ADVERTISEMENT

ದೆಹಲಿ ವಿಮಾನನಿಲ್ದಾಣದಲ್ಲಿ ಅಮೆರಿಕ ಪ್ರಜೆ ವಶಕ್ಕೆ

ಪಿಟಿಐ
Published 11 ಜೂನ್ 2025, 15:38 IST
Last Updated 11 ಜೂನ್ 2025, 15:38 IST
ಸಿಐಎಸ್‌ಎಫ್‌
ಸಿಐಎಸ್‌ಎಫ್‌   

ನವದೆಹಲಿ: ಅನಧಿಕೃತ ಜಿಪಿಎಸ್‌ ಉಪಕರಣವನ್ನು ಇಟ್ಟುಕೊಂಡಿದ್ದ ಆರೋಪದಡಿ ಅಮೆರಿಕ ಪ್ರಜೆಯೊಬ್ಬರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ವಶಕ್ಕೆ ಪಡೆಯಲಾಗಿದೆ.

‘ವಶಕ್ಕೆ ಪಡೆಯಲಾಗಿರುವ ವ್ಯಕ್ತಿಯು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ಹೊರಟಿದ್ದರು. ಸಿಐಎಸ್‌ಎಫ್ ಸಿಬ್ಬಂದಿ ಭದ್ರತಾ ತಪಾಸಣೆ ನಡೆಸಿದ ವೇಳೆ ಅವರ ಬಳಿ ಗರ್ಮಿನ್‌ ಕಂಪನಿ ನಿರ್ಮಿತ ಜಿಪಿಎಸ್‌ ಇರುವುದು ಪತ್ತೆಯಾಗಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಆರೋಪಿಯನ್ನು ಮುಂದಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ದೂರಸಂಪರ್ಕ ನಿಯಮಗಳಡಿ ಭಾರತದಲ್ಲಿ ಜಿಪಿಎಸ್‌ ಉಪಕರಣ ಮತ್ತು ಸ್ಯಾಟಲೈಟ್‌ ಫೋನ್‌ಗಳ ಸಾಗಾಟ ನಿಷೇಧಿಸಲಾಗಿದೆ ಮತ್ತು ಅವುಗಳ ಬಳಕೆಯ ಮೇಲೆ ನಿಗಾ ಇಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.