
ಬೈರೂತ್: ಯೂರೋಪ್ ಮತ್ತು ಮಧ್ಯ ಪೂರ್ವದ ಕೆಲವೆಡೆ ದಾಳಿ ನಡೆಸಲು ಸಂಚು ನಡೆಸಿದ್ದರು ಎಂದು ಶಂಕಿಸಲಾದ ಇಸ್ಲಾಮಿಕ್ ಸ್ಟೇಟ್ ಗುಂಪಿನ ಹಿರಿಯ ನಾಯಕನನ್ನು ಗುರಿಯಾಗಿಸಿ ಅಮೆರಿಕದ ಕೇಂದ್ರ ಕಮಾಂಡ್‌ನ ಪಡೆಗಳು ಇಲ್ಲಿ ಹೆಲಿಕಾಪ್ಟರ್ ದಾಳಿಯನ್ನು ನಡೆಸಿವೆ.
‘ಸಿರಿಯಾದ ಉತ್ತರ ಭಾಗದಲ್ಲಿ ಬೆಳಿಗ್ಗೆಯೇ ಪಡೆಗಳು ಏಕಪಕ್ಷೀಯವಾಗಿ ದಾಳಿ ನಡೆಸಿವೆ. ಯಾರನ್ನು ಗುರಿಯಾಗಿಸಿ ದಾಳಿ ನಡೆದಿತ್ತೋ ಆತ ಮೃತಪಟ್ಟಿರುವ ಸಾಧ್ಯತೆ ಇದೆ. ದಾಳಿಯಲ್ಲಿ ಶಸ್ತ್ರಸಜ್ಜಿತರಾಗಿದ್ದ ಇತರ ಇಬ್ಬರು ಹತರಾಗಿದ್ದಾರೆ’ ಎಂದು ಹೇಳಿಕೆ ತಿಳಿಸಿದೆ. ಆದರೆ, ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.
ದಾಳಿ ವೇಳೆಯಲ್ಲಿ ಯಾವುದೇ ನಾಗರಿಕ ಅಥವಾ ಅಮೆರಿಕ ಸೇನೆಯ ಯೋಧರು ಗಾಯಗೊಂಡಿಲ್ಲ ಎಂದು ಹೇಳಿಕೆ ಸ್ಪಷ್ಟಪಡಿಸಿದೆ. ಸಿರಿಯಾದ ನಾಗರಿಕ ಹಕ್ಕುಗಳ ಕಣ್ಗಾವಲು ಸಂಸ್ಥೆ ಪ್ರಕಾರ, ಇಸ್ಲಾಮಿಕ್ ಸ್ಟೇಟ್‌ನ ಶಂಕಿತ ಇದ್ದ ಎಂದು ಶಂಕಿಸಲಾದ ಕಟ್ಟಡದ ಮೇಲೆ ದಾಳಿ ನಡೆದಿದೆ. ಈ ಸ್ಥಳ ಟರ್ಕಿಗೆ ಹೊಂದಿಕೊಂಡಿರುವ ಸಿರಿಯಾ ಗಡಿಯಲ್ಲಿರುವ ಅಲ್ ಸುವಾಯ್‌ದಾಹ್ ಗ್ರಾಮವಾಗಿದೆ. ಬ್ರಿಟನ್ ಮೂಲದ ಈ ಸಂಸ್ಥೆಯು, ನಿಗದಿತ ಗುರಿ ಇದ್ದ ಪ್ರದೇಶದಲ್ಲಿ ಮುಖ್ಯ ಶಂಕಿತ ಸೇರಿ ಮೂವರು ಹತರಾಗಿದ್ದಾರೆ ಎಂದು ತಿಳಿಸಿದೆ.
36 ಸಾವು: ಈ ಮಧ್ಯೆ, ಪ್ರತ್ಯೇಕ ಘಟನೆಗಳಲ್ಲಿ ಭಾನುವಾರ ಶಂಕಿತ ಐಎಸ್ ದಾಳಿಕೋರರು ಸಿರಿಯಾದಲ್ಲಿ 36 ಮಂದಿ ಬೇಟೆಗಾರರು ಮತ್ತು ಐದು ಮಂದಿ ಕುರಿಗಾಹಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.