ADVERTISEMENT

ಕೊರೊನಾ ಲಸಿಕೆ ಸಂಶೋಧನೆ ಮಾಹಿತಿಯನ್ನು ಚೀನಾ ಹ್ಯಾಕ್ ಮಾಡುತ್ತಿದೆ: ಅಮೆರಿಕ ಆರೋಪ

ಏಜೆನ್ಸೀಸ್
Published 12 ಮೇ 2020, 4:18 IST
Last Updated 12 ಮೇ 2020, 4:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿಯಲ್ಲಿ ನಡೆಯುತ್ತಿರುವ ಸಂಶೋಧನೆಯ ಮಾಹಿತಿಯನ್ನು ಕದಿಯಲು ಚೀನಾದ ಹ್ಯಾಕರ್‌ಗಳು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.

ಚೀನಾ ಹ್ಯಾಕರ್‌ಗಳ ಕುರಿತು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಮತ್ತು ಸೈಬರ್ ಭದ್ರತಾ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಮತ್ತು ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿವೆ.

ಕೊರೊನಾಗೆ ಲಸಿಕೆ ಕಂಡುಹಿಡಿಯಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಮಟ್ಟದಲ್ಲಿ ನಡೆಯುತ್ತಿರುವ ಸಂಶೋಧನೆಯ ಮಾಹಿತಿ ಕಳವಿಗೆ ಚೀನಾ ಹ್ಯಾಕರ್‌ಗಳು ಯತ್ನಿಸುತ್ತಿದ್ದಾರೆ ಎಂದಿರುವ ಎಫ್‌ಬಿಐ ಈ ಕುರಿತುಎಚ್ಚರಿಕೆಯ ಸಂದೇಶವುಳ್ಳಪ್ರಕಟಣೆ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಕೊರೊನಾ ಚಿಕಿತ್ಸೆ, ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ, ತಂತ್ರಜ್ಞಾನವನ್ನು ಕಳವು ಮಾಡಲೂ ಹ್ಯಾಕರ್‌ಗಳು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ADVERTISEMENT

ಹ್ಯಾಕರ್‌ಗಳು ಚೀನಾ ಸರ್ಕಾರದ ನಂಟು ಹೊಂದಿದ್ದಾರೆ ಎಂದೂ ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ. ಈ ವಿಚಾರವಾಗಿ ಕೆಲವೇ ದಿನಗಳಲ್ಲಿ ಅಮೆರಿಕವು ಅಧಿಕೃತ ಎಚ್ಚರಿಕೆ ನೀಡುವ ಸಾಧ್ಯತೆ ಇದೆ.

ಆದರೆ, ಈ ಆರೋಪಗಳನ್ನು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಅಲ್ಲಗಳೆದಿದ್ದಾರೆ. ಎಲ್ಲ ರೀತಿಯ ಸೈಬರ್ ದಾಳಿಯನ್ನು ಚೀನಾ ವಿರೋಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.