ADVERTISEMENT

ಭಾರತಕ್ಕೆ ಪ್ರಯಾಣ ಮುಂದೂಡಿ: ನಾಗರಿಕರಿಗೆ ಅಮೆರಿಕ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 6:19 IST
Last Updated 20 ಏಪ್ರಿಲ್ 2021, 6:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದ್ದು, ಪ್ರಯಾಣ ಮಾಡುವ ಯೋಚನೆಯಿದ್ದರೆ ಅದನ್ನು ಮುಂದೂಡಿ ಎಂದು ಹೇಳಿದೆ.

ಅಮೆರಿಕದ ಕಾಯಿಲೆ ನಿಯಂತ್ರಣ ಮಂಡಳಿ ಈ ಬಗ್ಗೆ ಸೂಚನೆ ನೀಡಿದ್ದು, ಭಾರತದಲ್ಲಿ ಕೋವಿಡ್ 19 ಪ್ರಕರಣ ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಹೀಗಾಗಿ ಅಲ್ಲಿಗೆ ಪ್ರಯಾಣ ಮಾಡದಿರುವುದು ಉತ್ತಮ ಎಂದು ಎಚ್ಚರಿಕೆ ನೀಡಿದೆ.

ಈ ಕುರಿತು ಏಪ್ರಿಲ್ 19ರಂದು ಮಂಡಳಿ ಸೂಚನೆ ನೀಡಿದ್ದು, ಲಸಿಕೆ ಕಾರ್ಯಕ್ರಮ ನಡೆಸಿದ್ದರೂ, ವೈಯಕ್ತಿಕವಾಗಿ ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸೂಚನೆ ನೀಡಿದೆ.

ADVERTISEMENT

ಹಾಗಿದ್ದೂ, ತೀರಾ ಅಗತ್ಯವಿದ್ದಲ್ಲಿ ಮಾತ್ರ ಲಸಿಕೆ ತೆಗೆದುಕೊಂಡು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಪ್ರಯಾಣ ಮಾಡಿ ಎಂದು ಹೇಳಿದೆ.

ಈಗಾಗಲೇ ಇಂಗ್ಲೆಂಡ್ ಸಹಿತ ಹಲವು ರಾಷ್ಟ್ರಗಳು ಭಾರತಕ್ಕೆ ವಿಮಾನ ಸಂಚಾರ ನಿರ್ಬಂಧಿಸಿದ್ದು, ಪ್ರಯಾಣ ನಿಷೇಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.