ADVERTISEMENT

ಅಮೆರಿಕದ ಸುಂಕ ಪ್ರಹಾರದಿಂದ ಭಾರತದ ಶೇ 55ರಷ್ಟು ಉತ್ಪನ್ನಗಳ ಮೇಲೆ ಪರಿಣಾಮ: ಕೇಂದ್ರ

ಏಜೆನ್ಸೀಸ್
Published 11 ಆಗಸ್ಟ್ 2025, 11:09 IST
Last Updated 11 ಆಗಸ್ಟ್ 2025, 11:09 IST
   

ಮುಂಬೈ : ಭಾರತದಿಂದ ಅಮೆರಿಕಗೆ ರಫ್ತಾಗುವ ಶೇ 55ರಷ್ಟು ಉತ್ಪನ್ನಗಳ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ವಿಧಿಸಿರುವ ಸುಂಕವು ಪರಿಣಾಮ ಬೀರಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಿದ್ದರ ಪರಿಣಾಮ ಭಾರತೀಯ ಸರಕುಗಳ ಮೇಲೆ ಟ್ರಂಪ್ ಸರ್ಕಾರ ಹೆಚ್ಚುವರಿ ಶೇ 25ರಷ್ಟು ಸುಂಕವನ್ನು ಹೇರಿತ್ತು. ಇದು ಅಮೆರಿಕದ ವ್ಯಾಪಾರ ಪಾಲುದಾರ ದೇಶದ ಮೇಲೆ ವಿಧಿಸಿದ ಅತ್ಯಧಿಕ ತೆರಿಗೆಯಾಗಿದೆ.

ಅಮೆರಿಕವು ಈ ಮೊದಲು ಭಾರತೀಯ ಸರಕುಗಳ ಮೇಲೆ ವಿಧಿಸಿದ್ದ ಶೇ 25 ರಷ್ಟು ಸುಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ಶಾಸಕರೊಬ್ಬರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ADVERTISEMENT

ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ಮಾತನಾಡಿ, ಭಾರತದ ರಫ್ತುದಾರರು, ಪಾಲುದಾರರು ಸೇರಿದಂತೆ ವಿವಿಧ ಕೈಗಾರಿಕೆಗಳೊಂದಿಗೆ ಚರ್ಚೆ ನಡೆಸಿರುವ ವಾಣಿಜ್ಯ ಇಲಾಖೆಯು ಅವರ ಅಭಿಪ್ರಾಯಗಳನ್ನು ಪಡೆದಿದೆ ಎಂದು ಹೇಳಿದ್ದಾರೆ.

ಜಗತ್ತಿನ ದೊಡ್ಡ ಆರ್ಥಿಕತೆಗಳಾಗಿರುವ ಭಾರತ ಮತ್ತು ಅಮೆರಿಕದ ನಡುವೆ ಕಳೆದ ಆರ್ಥಿಕ ವರ್ಷದಲ್ಲಿ 87 ಶತಕೋಟಿಯಷ್ಟು ವ್ಯಾಪಾರ ವಹಿವಾಟು ನಡೆದಿದೆ ಎಂದು ಭಾರತ ಸರ್ಕಾರವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.