ಮುಂಬೈ: ಜಾಹೀರಾತು, ಸೂಚನಾ ಫಲಕಗಳಲ್ಲಿ ಇಂಗ್ಲಿಷ್, ಹಿಂದಿ ಜೊತೆಗೆ ಮರಾಠಿಯನ್ನು ಬಳಸುವಂತೆ ಮಹಾರಾಷ್ಟ್ರ ಸರ್ಕಾರ ಕೊಂಕಣ ರೈಲ್ವೆಗೆ ಸೂಚಿಸಿದೆ.
ಈ ಸಂಬಂಧ ಮಹಾರಾಷ್ಟ್ರ ಸರ್ಕಾರದ ಮರಾಠಿ ಭಾಷಾ ವಿಭಾಗವು ಕೊಂಕಣ ರೈಲ್ವೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ತ್ರಿಭಾಷಾ ಸೂತ್ರವನ್ನು ಪಾಲಿಸುವಂತೆ ತಿಳಿಸಿದೆ.
‘ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಇಂಗ್ಲಿಷ್, ಹಿಂದಿ ಜೊತೆಗೆ ಆಯಾ ರಾಜ್ಯಗಳ ಭಾಷೆ ಬಳಸುವುದು ಕಡ್ಡಾಯ. ಹೀಗಾಗಿ ಜಾಹೀರಾತು, ಸೂಚನಾ ಫಲಕ ಹಾಗೂ ಪತ್ರಿಕಾ ಪ್ರಕಟಣೆಗಳನ್ನು ನೀಡುವಾಗ ಮರಾಠಿಯನ್ನು ಕಡ್ಡಾಯವಾಗಿ ಬಳಸಬೇಕು’ ಎಂದು ತಿಳಿಸಲಾಗಿದೆ.
ಮುಂಬೈ ಬಳಿಯ ರೋಹಾದಿಂದ ಮಂಗಳೂರು ಬಳಿಯ ತೊಕ್ಕೂರು ವರೆಗೆ ಒಟ್ಟು 756 ಕಿ.ಮೀ. ಉದ್ದದ ಮಾರ್ಗದಲ್ಲಿ ಕೊಂಕಣ ರೈಲ್ವೆ ಕಾರ್ಯಾಚರಣೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.