ADVERTISEMENT

ಅನ್ವೇಷಣೆಯ ಶಕ್ತಿ ಉಪಯೋಗಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್‌

GJ-INNOVATION-KOVIND

ಪಿಟಿಐ
Published 15 ಮಾರ್ಚ್ 2019, 19:28 IST
Last Updated 15 ಮಾರ್ಚ್ 2019, 19:28 IST
ರಾಮನಾಥ್‌ ಕೋವಿಂದ್‌
ರಾಮನಾಥ್‌ ಕೋವಿಂದ್‌   

ಗಾಂಧಿನಗರ: ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಅನ್ವೇಷಣೆಯ ಶಕ್ತಿಯನ್ನು ಉಪಯೋಗಿಸಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಕರೆ ನೀಡಿದ್ದಾರೆ.

ಅನ್ವೇಷಣೆಯ ಸಂಸ್ಕೃತಿ ಉತ್ತೇಜಿಸಲು ಪ್ರಯತ್ನಿಸಬೇಕು ಮತ್ತು ಅನ್ವೇಷಣೆಯ ಸಮಾಜ ಸೃಷ್ಟಿಯಾಗಬೇಕು ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ರಾಷ್ಟ್ರೀಯ ಅನ್ವೇಷಣೆ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ಅನ್ವೇಷಣೆ ಮತ್ತು ಉದ್ಯಮಶೀಲತೆ ಉತ್ಸವ’ ದಲ್ಲಿ ಅವರು ಮಾತನಾಡಿದರು.

ADVERTISEMENT

‘ಪ್ರಮುಖವಾದ ಅಭಿವೃದ್ಧಿಯ ಗುರಿಗಳನ್ನು ಮುಟ್ಟಬೇಕಾದರೆ ಮತ್ತು ಜವಾಬ್ದಾರಿಯುತ, ಒಳಗೊಳ್ಳುವಿಕೆಯ ಮತ್ತು ಸಂತಸದ ಸಮಾಜ ನಿರ್ಮಿಸಬೇಕಾದರೆ ಅನ್ವೇಷಣೆಯ ಶಕ್ತಿಯ ಬಗ್ಗೆ ಗಮನಹರಿಸಬೇಕು. ಈ ಮೂಲಕ ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ, ಇಂಧನ ಲಭ್ಯತೆ, ಪರಿಸರ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.