ADVERTISEMENT

ಬಾವಿಗೆ ಬಿದ್ದ ಮೊಬೈಲ್ ಹುಡುಕಲು ಹೋಗಿ ಮೂವರು ಯುವಕರ ಸಾವು!

ಪಿಟಿಐ
Published 24 ಜೂನ್ 2025, 16:09 IST
Last Updated 24 ಜೂನ್ 2025, 16:09 IST
<div class="paragraphs"><p>AI</p></div>

AI

   

ಫಿರೋಜಾಬಾದ್‌, ಉತ್ತರ ಪ್ರದೇಶ: ಬಾವಿಗೆ ಬಿದ್ದಿದ್ದ ಮೊಬೈಲ್ ಹುಡಕಲು ಹೋಗಿ ಮೂವರು ಯುವಕರು ಮಿಥೇನ್ ಅನಿಲ ಸೇವಿಸಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯ ಶಿಕೊಹಾಬಾದ್ ಎಂಬಲ್ಲಿ ಮಂಗಳವಾರ ನಡೆದಿದೆ.

ಮೃತರನ್ನು ದ್ರುವ್ (25), ಅಜಯ್ (25) ಹಾಗೂ ಚಾಂದವೀರ್ (26) ಎಂದು ಗುರುತಿಸಲಾಗಿದೆ.

ADVERTISEMENT

ಈ ಮೂವರು ಶಿಕೊಹಾಬಾದ್‌ನ ಹಾಳು ಬಾವಿಯೊಂದರ ಬಳಿ ಮೊಬೈಲ್ ಹಿಡಿದು ಕುಳಿತಿದ್ದಾಗ ದ್ರುವ್ ತನ್ನ ಮೊಬೈಲ್‌ ಅನ್ನು ಆಕಸ್ಮಿಕವಾಗಿ ಬಾವಿಯೊಳಗೆ ಕೆಡವಿದ್ದಾನೆ. ಮೊಬೈಲ್ ಹುಡುಕಲು ದ್ರುವ್ ಬಾವಿಯೊಳಗೆ ಇಳಿದಿದ್ದಾನೆ. ಕೆಲ ಹೊತ್ತಿನ ನಂತರ ಆತ ಬಾರದಿದ್ದನ್ನು ಕಂಡ ಆತನ ಸ್ನೇಹಿತರು ಅಜಯ್ ಹಾಗೂ ಚಾಂದವೀರ್ ಸಹ ಬಾವಿಗೆ ಇಳಿದಿದ್ದರು. ಆದರೆ, ಮೂವರು ಬಹಳ ಹೊತ್ತಿನ ನಂತರ ಕಾಣದಿದ್ದಾಗ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಪೊಲೀಸರು ಸಲಕರಣೆಗಳನ್ನು ಬಳಸಿ ಬಾವಿಯಲ್ಲಿ ಇಳಿದು ನೋಡಿದಾಗ ಮೂವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೂವರೂ ಮಿಥೇನ್ ಅನಿಲ ಸೇವನೆಯಿಂದ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಬಾವಿಯು ಮೃತ ಯುವಕರ ಪೂರ್ವಜರು ಬಳಸುತ್ತಿದ್ದ ಬಾವಿಯಾಗಿದೆ ಎಂದು ಫಿರೋಜಾಬಾದ್‌ ಜಿಲ್ಲೆಯ ಎಡಿಸಿ ವಿಶು ರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.