ADVERTISEMENT

ಹೈಕೋರ್ಟ್‌ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ‘ಉಪ್ರ’ ಸರ್ಕಾರದ ಮಾಜಿ ವಕೀಲ

ಏಜೆನ್ಸೀಸ್
Published 24 ಅಕ್ಟೋಬರ್ 2018, 2:18 IST
Last Updated 24 ಅಕ್ಟೋಬರ್ 2018, 2:18 IST
   

ಅಲಹಾಬಾದ್‌: ಉತ್ತರ ಪ್ರದೇಶ ಸರ್ಕಾರದ ಮಾಜಿ ಸಲಹೆಗಾರ ವಕೀಲ ರಮೇಶ್‌ ಚಂದ್ರ ಪಾಂಡೆ ಅವರುಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ನೂತನ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗೋಮತಿ ನಗರದಲ್ಲಿರುವ ಕಟ್ಟಡದ ಮೂರನೇ ಮಹಡಿಯಿಂದ ಪಾಂಡೆ ಜಿಗಿದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಲಾಗಿದೆ. ತಮ್ಮ ಕಿರಿಯ ಸಹೋದ್ಯೋಗಿಯನ್ನು ಭೇಟಿ ಮಾಡಲು ಬಂದಿದ್ದ ಸಂದರ್ಭ ಮಧ್ಯಾಹ್ಯ 1.45ರ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಕೀಲರು ಈ ನಿರ್ಧಾರ ಕೈಗೊಳ್ಳಲು ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ’ ಎಂದು ವಿಭುತಿ ಖಂಡ್‌ ಪ್ರದೇಶದ ಇನ್‌ಸ್ಪೆಕ್ಟರ್‌ ಮಥುರಾ ರೈ ಹೇಳಿದರು.

ಮಾನಸಿಕ ಒತ್ತಡದಿಂದಾಗಿಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವು ವಕೀಲರು ಹೇಳಿಕೆ ನೀಡಿದ್ದು, ಮತ್ತೆ ಕೆಲವರು ಈ ಸಂಬಧ ತಕ್ಷಣ ಕೊಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ADVERTISEMENT

‘ಘಟನೆ ನಡೆದ ತಕ್ಷಣ ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಡಾ. ರಾಮ್‌ ಮನೋಹರ ಲೋಹಿಯಾ ಆಸ್ಪತ್ರೆಗೆ ಪಾಂಡೆ ಅವರನ್ನು ದಾಖಲಿಸಲಾಯಿತು. ಆದರೆಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ’ ಎಂದೂ ರೈ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.