ADVERTISEMENT

ಉತ್ತರ ಪ್ರದೇಶ: ಮದರಸಾಗಳ ಮಾಹಿತಿ ಸಂಗ್ರಹ

ಪಿಟಿಐ
Published 19 ನವೆಂಬರ್ 2025, 15:44 IST
Last Updated 19 ನವೆಂಬರ್ 2025, 15:44 IST
<div class="paragraphs"><p>ಸ್ಫೋಟ</p></div>

ಸ್ಫೋಟ

   

ಲಖನೌ: ದೆಹಲಿ ಸ್ಫೋಟದ ಬೆನ್ನಲ್ಲೇ, ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್‌) ರಾಜ್ಯದ ಎಂಟು ಜಿಲ್ಲೆಗಳ ಮದರಸಾಗಳ ಸಿಬ್ಬಂದಿ, ಶಿಕ್ಷಕರು ಮತ್ತು ಅಲ್ಲಿನ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಯಾಗ್‌ರಾಜ್‌, ಪ್ರತಾಪ್‌ಗಢ, ಕೌಶಾಂಭಿ, ಫತೇಪುರ, ಬಾಂದಾ, ಹಮೀರ್‌ಪುರ್, ಚಿತ್ರಕೂಟ ಮತ್ತು ಮಹೊಬಾ ಜಿಲ್ಲೆಗಳ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳಿಗೆ ಪತ್ರ ಬರೆದಿರುವ ಎಟಿಎಸ್‌, ಆದಷ್ಟು ಬೇಗ ತಮ್ಮ ವ್ಯಾಪ್ತಿಯ ಮದರಸಾಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದೆ.  ಮದರಸಾಗಳ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವಿಳಾಸ, ಮೊಬೈಲ್‌ ಸಂಖ್ಯೆ, ಪೋಷಕರ ಹೆಸರು ಮತ್ತಿತರ ವಿವರಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ. 

ADVERTISEMENT

’ಎಟಿಎಸ್‌ ಕೋರಿರುವ ಮಾಹಿತಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ಪ್ರಯಾಗ್‌ರಾಜ್‌ನಲ್ಲಿ 206 ಮದರಸಾಗಳಿವೆ ಎಂದು ಅಲ್ಲಿನ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಕೃಷ್ಣ ಮುರಾರಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.