ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಕಾರ್ಯಾಚರಣೆ (ಪ್ರಾತಿನಿಧಿಕ ಚಿತ್ರ)
ಪಿಟಿಐ ಚಿತ್ರ
ಸಂಭಲ್: ಉತ್ತರ ಪ್ರದೇಶದ ಸಂಭಲ್‌ನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮಸೀದಿಯನ್ನು ಬುಲ್ಡೋಜರ್ ಮೂಲಕ ಮುಸ್ಲಿಮರೇ ಕೆಡವಿದ್ದಾರೆ.
ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ ಬುಜುರ್ಗ್ ಗ್ರಾಮದಲ್ಲಿ ಘಟನೆ ನಡೆದಿದೆ.
ಅನಧಿಕೃತ ಪ್ರದೇಶದಲ್ಲಿ ನಿರ್ಮಿಸಿದ್ದ ಗೌಸುಲ್‌ಬರಾ ಮಸೀದಿಯನ್ನು ಕೆಡವಲು ಜಿಲ್ಲಾಡಳಿತ ಮುಂದಾಗಿದ್ದ ವೇಳೆ ಮಸೀದಿಯ ಸಮಿತಿ ಸದಸ್ಯರು ನಾಲ್ಕು ದಿನಗಳ ಕಾಲಾವಕಾಶ ಕೋರಿದ್ದರು. ಅದರಂತೆ ಕಾಲಾವಕಾಶ ಮುಗಿದ ಕಾರಣ ಭಾನುವಾರ ಸಮಿತಿಯ ಸದಸ್ಯರು ಬುಲ್ಡೋಜರ್ ಮೂಲಕ ಮಸೀದಿಯನ್ನು ನೆಲಸಮ ಮಾಡಿದ್ದಾರೆ.
‘ನಮಗೆ ನೀಡಲಾದ ನಾಲ್ಕು ದಿನಗಳು ಪೂರ್ಣಗೊಂಡಿದೆ. ನಾವು ಮಸೀದಿ ಕೆಡವುವ ಕಾರ್ಯವನ್ನು ತ್ವರಿತಗೊಳಿಸುತ್ತಿದ್ದೇವೆ’ ಎಂದು ಮಸೀದಿ ಸಮಿತಿಯ ಸದಸ್ಯ ಮತ್ತು ರಾಯ ಬುಜುರ್ಗ್ ಗ್ರಾಮದ ನಿವಾಸಿ ಯಾಸಿನ್ ಹೇಳಿದ್ದಾರೆ.
ಅಕ್ಟೋಬರ್ 2 ರಂದು ಅದೇ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದುವೆ ಮಂಟಪವನ್ನು ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಕೆಡವಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.