ADVERTISEMENT

ಪೀಠೋಪಕರಣ ಹಣ ಕೇಳಿದ್ದಕ್ಕೆ ವ್ಯಾಪಾರಿಯ ಮನೆ ಒಡೆಯಲು ಆದೇಶಿಸಿದ ಅಧಿಕಾರಿ

ಪಿಟಿಐ
Published 17 ಜುಲೈ 2022, 4:53 IST
Last Updated 17 ಜುಲೈ 2022, 4:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಉತ್ತರ ಪ್ರದೇಶದಲ್ಲಿ ಪೀಠೋಪಕರಣ ಮಳಿಗೆಯಿಂದ ಖರೀದಿಸಿದ ವಸ್ತುಗಳ ಹಣ ಪಾವತಿಸುವಂತೆ ಕೇಳಿಕೊಂಡಿದ್ದಕ್ಕೆ ವ್ಯಾಪಾರಿಯ ಮನೆಯ ಒಂದು ಭಾಗವನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ.

ಉಪ ವಿಭಾಗೀಯ ಅಧಿಕಾರಿಯಾಗಿದ್ದ ಘನಶ್ಯಾಮ್ ವರ್ಮಾ ಎಂಬವರು ವ್ಯಾಪಾರಿಯ ಮನೆಯ ಭಾಗ ಒಡೆಯಲು ಆದೇಶ ನೀಡಿದ್ದರು. ಅವರ ಕೃತ್ಯ ಬೆಳಕಿಗೆ ಬರುತ್ತಲೇ ಮೊರಾದಾಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಸಿಂಗ್, ಅಧಿಕಾರಿಯನ್ನು ಹುದ್ದೆಯಿಂದ ಅಮಾನತು ಮಾಡಿದ್ದಾರೆ.

ಮೊರಾದಾಬಾದ್‌ನ ವಿಭಾಗೀಯ ಕಮಿಷನರ್ ಆಂಜನೇಯ ಕುಮಾರ್ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ADVERTISEMENT

ತಮ್ಮ ಮಳಿಗೆಯಿಂದ ಘನಶ್ಯಾಮ್ ಅವರು ₹2.67 ಲಕ್ಷ ಮೌಲ್ಯದ ಪೀಠೋಪಕರಣ ಖರೀದಿಸಿದ್ದರು. ಆದರೆ ಹಣ ಪಾವತಿಸಿರಲಿಲ್ಲ. ಹಣ ಕೊಡುವಂತೆ ಕೇಳಿದ್ದಕ್ಕೆ, ಮನೆ ಒಡೆಯಲು ಅಧಿಕಾರಿ ಆದೇಶಿಸಿದ್ದಾರೆ. ಅದರಂತೆ ಬುಲ್ಡೋಜರ್ ಬಳಸಿ ಮನೆಯ ಒಂದು ಭಾಗವನ್ನು ಧ್ವಂಸ ಮಾಡಿದ್ದಾರೆ ಎಂದು ಮಳಿಗೆಯ ವ್ಯಾಪಾರಿ ಝಹೀದ್ ಅಹ್ಮದ್, ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.