ADVERTISEMENT

ಸರ್ಕಾರಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ10 ಸಮತಲ ಮೀಸಲಾತಿ: ಉತ್ತರಾಖಂಡ ಸಿಎಂ

ಪಿಟಿಐ
Published 26 ಜುಲೈ 2025, 15:42 IST
Last Updated 26 ಜುಲೈ 2025, 15:42 IST
<div class="paragraphs"><p>ಪುಷ್ಕರ್‌ ಸಿಂಗ್‌ ಧಾಮಿ</p></div>

ಪುಷ್ಕರ್‌ ಸಿಂಗ್‌ ಧಾಮಿ

   

ಡೆಹ್ರಾಡೂನ್‌: ಸರ್ಕಾರಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ 10ರಷ್ಟು ಸಮತಲ ಮೀಸಲಾತಿ ನೀಡಲು ಸಿದ್ದತೆ ನಡೆಸುತ್ತಿರುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್‌ ಧಾಮಿ ಶನಿವಾರ ಹೇಳಿದ್ದಾರೆ. 

ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಕುಟುಂಬವನ್ನು ಗೌರವಿಸಲು ಆಯೋಜಿಸಿದ್ದ ಸಭೆಯಲ್ಲಿ ಧಾಮಿ ಪಾಲ್ಗೊಂಡಿದ್ದರು. ಈ ವೇಳೆ ಮೀಸಲಾತಿ ಕುರಿತು ಪ್ರಕಟಿಸಿದ್ದಾರೆ.  

ADVERTISEMENT

‘ರಾಜ್ಯ ಸಾರಿಗೆ, ಪೊಲೀಸ್‌, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಶೇ 10ರಷ್ಟು ಸಮತಲ ಮೀಸಲಾತಿಯನ್ನು ಅಗ್ನಿವೀರರಿಗೆ ನೀಡಲು ಯೋಜಿಸಲಾಗಿದೆ. ಈ ಸಂಬಂಧಿಸಿದ ಪ್ರಸ್ತಾವವನ್ನು ಶೀಘ್ರವೇ ರಾಜ್ಯ ಸಂಪುಟದ ಅನುಮೋದನೆಗೆ ಮಂಡಿಸಲಾಗುವುದು. ಅಗ್ನಿಪಥ ಯೋಜನೆ ಅನ್ವಯ ನಾಲ್ಕು ವರ್ಷಗಳ ಸೇವೆ ಪೂರೈಸಿದ ಅಗ್ನಿವೀರರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ’ ಎಂದೂ ಧಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.