ADVERTISEMENT

ಕೋವಿಡ್-19 ಸೋಂಕಿತರಿಗೆ ನೆರವಾಗಲು ಉತ್ತರಾಖಂಡ ಪೊಲೀಸರಿಂದ ʼಮಿಷನ್‌ ಸ್ಥೈರ್ಯʼ

ಏಜೆನ್ಸೀಸ್
Published 11 ಮೇ 2021, 9:32 IST
Last Updated 11 ಮೇ 2021, 9:32 IST
ಉತ್ತರಾಖಂಡ ಪೊಲೀಸ್‌ ಮಹಾನಿರ್ದೇಶಕ ಅಶೋಕ್‌ ಕುಮಾರ್‌
ಉತ್ತರಾಖಂಡ ಪೊಲೀಸ್‌ ಮಹಾನಿರ್ದೇಶಕ ಅಶೋಕ್‌ ಕುಮಾರ್‌   

ಡೆಹ್ರಾಡೂನ್:‌ ಕೋವಿಡ್-‌19 ಸೋಂಕಿತರಿಗೆ ಆಮ್ಲಜನಕ, ಪ್ಲಾಸಾ ಮತ್ತು ಹಾಸಿಗೆಗಳನ್ನು ಒದಗಿಸಲು ನೆರವಾಗಲು ಉತ್ತರಾಖಂಡ ಪೊಲೀಸರು ʼಮಿಷನ್‌ ಹೌಸ್ಲಾʼ (ಮಿಷನ್‌ ಸ್ಥೈರ್ಯ) ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಶೋಕ್‌ ಕುಮಾರ್‌, ʼಸಹಾಯ ಮಾಡಲು ಬಯಸುವ ಮತ್ತು ಸಹಾಯಕ್ಕಾಗಿ ಎದುರು ನೋಡತ್ತಿರುವ ಸಾಕಷ್ಟು ಜನರು ಸಮಾಜದಲ್ಲಿ ಇದ್ದಾರೆ. ಪೊಲೀಸ್‌ ಇಲಾಖೆಯು ಈ ಇಬ್ಬರನ್ನೂ ಸೇರಿಸುವ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆʼ ಎಂದು ಹೇಳಿದ್ದಾರೆ.

ʼನಾವು ಮೇ 1ರಿಂದ ಅಭಿಯಾನ ಆರಂಭಿಸಿದೆವು. ಅದು ಹತ್ತು ದಿನಗಳನ್ನು ಪೂರೈಸಿದೆ. ಇದುವರೆಗೆ 4,365 ಕರೆಗಳನ್ನು ಸ್ವೀಕರಿಸಿದ್ದೇವೆʼ ಎಂದಿದ್ದಾರೆ. ಮುಂದುವರಿದು, ಅಭಿಯಾನದ ಭಾಗವಾಗಿ ಸಾರ್ವಜನಿಕರಿಗೆ ಪಡಿತರ, ಆಂಬುಲೆನ್ಸ್‌ ಸೇವೆ ಮತ್ತು ಅಂತ್ಯಸಂಸ್ಕಾರಕ್ಕೂ ನೇರವಾಗಲಿದ್ದೇವೆ. ತುರ್ತು ಸೇವೆಗಳಿಗಾಗಿ ಎರಡು ಟೋಲ್‌ ಫ್ರೀ (112 ಮತ್ತು 9411112701) ನಂಬರ್‌ಗಳನ್ನು ತೆರೆದಿದ್ದೇವೆ ಎಂದೂ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.