ADVERTISEMENT

ರುದ್ರಪ್ರಯಾಗ್ ಜಿಲ್ಲೆಯಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ 3 ಯುವಕರ ರಕ್ಷಣೆ

ಉತ್ತರಾಖಂಡ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಘಟನೆ

ಪಿಟಿಐ
Published 22 ಜನವರಿ 2025, 3:02 IST
Last Updated 22 ಜನವರಿ 2025, 3:02 IST
<div class="paragraphs"><p>ರಕ್ಷಣೆ</p></div>

ರಕ್ಷಣೆ

   

ಡೆಹರಾಡೂನ್: ಉತ್ತರಾಖಂಡ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಅರಣ್ಯಗಳಿಂದ ಆವೃತ್ತವಾದ ಬೆಟ್ಟ–ಗುಡ್ಡದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಬಿಹಾರ ಮೂಲದ 21 ವರ್ಷದ ಮೂವರು ಯುವಕರನ್ನು ಪೊಲೀಸರು ರಕ್ಷಿಸಿದ್ದಾರೆ.

ರಕ್ಷಿಸಲ್ಪಟ್ಟವರನ್ನು ನಮನ್ ಯಾದವ್, ಆಧಿರಾಜ್, ಸಮೀರ್ ಕುಮಾರ್ ಎಂದು ಗುರುತಿಸಲಾಗಿದೆ. ಇದರಲ್ಲಿ ನಮನ್ ಯಾದವ್‌ಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಯುವಕರು ರುದ್ರಪ್ರಯಾಗ್ ಜಿಲ್ಲೆಯ ಕೇದಾರನಾಥ್ ದೇವಸ್ಥಾನ ಬಳಿಯ ದೇವೋರಿತಾಳ್–ಚೋಪ್ಟಾ ಟ್ರೆಕಿಂಗ್ ಪ್ರದೇಶದಲ್ಲಿ ಕಳೆದ ಶನಿವಾರ ಚಾರಣಕ್ಕೆ ಹೋಗಿದ್ದರು.

ಚಾರಣದ ಮುಕ್ತಾಯ ಕೇಂದ್ರಕ್ಕೆ ಈ ಯುವಕರು ವಾಪಸ್ ಬಾರದೇ ಇದ್ದಾಗ ಅರಣ್ಯ ಇಲಾಖೆಯ ಸಿಬ್ಬಂದಿ ರಾಜ್ಯ ವಿಪತ್ತು ಕಾರ್ಯನಿರ್ವಹಣೆ ಪಡೆಯ (ಎಸ್‌ಡಿಆರ್‌ಎಫ್) ಸಹಾಯದೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಮೂರು ದಿನಗಳ ಬಳಿಕ ಯುವಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.