ವಿ. ನಾರಾಯಣನ್
(ಚಿತ್ರ ಕೃಪೆ–lpsc.gov.in)
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷರನ್ನಾಗಿ ವಿ. ನಾರಾಯಣನ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.
ಇಸ್ರೊ ಹಾಲಿ ಅಧ್ಯಕ್ಷ ವಿ. ಸೋಮನಾಥ್ ಅವರಿಂದ ಅಧಿ ಕಾರವನ್ನು ನಾರಾಯಣನ್ ಅವರು ಜ. 14ರಂದು ವಹಿಸಿಕೊಳ್ಳಲಿದ್ದಾರೆ .
ಕೇಂದ್ರ ಸಂಪುಟದ ನೇಮಕಾತಿಗಳ ಸಮಿತಿಯು ನಾರಾಯಣನ್ ಅವರನ್ನು ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇಸ್ರೊ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ .
ನಾರಾಯಣನ್ ಈಗ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇ ಶಕರಾಗಿದ್ದಾರೆ. ಅವರು ರಾಕೆಟ್ ಮತ್ತು ಉಪಗ್ರಹ ಪ್ರೊಪಲ್ಷನ್ ವಿಷಯ ಪರಿಣತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.