ADVERTISEMENT

‘ವಂದೇ ಭಾರತ್ ಎಕ್ಸ್‌ಪ್ರೆಸ್‌’ ರೈಲು: ಚೀನಾ ಕಂಪನಿ ಟೆಂಡರ್ ರದ್ದತಿಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 16:13 IST
Last Updated 11 ಜುಲೈ 2020, 16:13 IST
ವಂದೆ ಭಾರತ್ ಎಕ್ಸ್‌ಪ್ರೆಸ್
ವಂದೆ ಭಾರತ್ ಎಕ್ಸ್‌ಪ್ರೆಸ್   

ನವದೆಹಲಿ:ಅತಿ ವೇಗದ ‘ವಂದೇ ಭಾರತ್ ಎಕ್ಸ್‌ಪ್ರೆಸ್‌’ ರೈಲು ಯೋಜನೆಗೆ ಚೀನಾದ ಸಿಆರ್‌ಆರ್‌ಸಿ ಪಿಯೊನೀರ್ ಎಲೆಕ್ಟ್ರಿಕ್‌ ಕಂಪನಿಗೆ ನೀಡಿದ್ದ ಟೆಂಡರ್‌ ರದ್ದುಗೊಳಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.

ಚೆನ್ನೈನಲ್ಲಿನ ಭಾರತೀಯ ರೈಲ್ವೆ ಕೋಚ್‌ ಫ್ಯಾಕ್ಟರಿ ಹಾಗೂ ಚೀನಾದ ಈ ಕಂಪನಿ ಜಂಟಿಯಾಗಿ ಈ ರೈಲನ್ನು ಅಭಿವೃದ್ಧಿ ಪಡಿಸುವ ಯೋಜನೆ ಇತ್ತು. 2019ರ ಡಿಸೆಂಬರ್‌ನಲ್ಲಿ ಜಾಗತಿಕ ಟೆಂಡರ್‌ ಕರೆಯಲಾಗಿತ್ತು. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹೆಸರಿನಲ್ಲಿ 44 ರೈಲುಗಳಿಗೆ ಎಲೆಕ್ಟ್ರಿಕ್‌ ಟ್ರ್ಯಾಕ್ಷನ್‌ ಅಭಿವೃದ್ಧಿ ಪಡಿಸುವ ಹೊಣೆಯನ್ನು ಚೀನಾದ ಈ ಕಂಪನಿಗೆ ನೀಡಲಾಗಿತ್ತು.

ಶುಕ್ರವಾರ ಆರಂಭವಾದ ಹರಾಜು ಪ್ರಕ್ರಿಯೆಯಲ್ಲಿ ಚೀನಾದ ಕಂಪನಿ ಹೊರತು ಪಡಿಸಿ ದೇಶದ ಆರು ಕಂ‍ಪನಿಗಳು ಪಾಲ್ಗೊಂಡಿದ್ದವು.

ADVERTISEMENT

ಗಾಲ್ವನ್‌ ಕಣಿವೆಯಲ್ಲಿ ಭಾರತ– ಚೀನಾ ಸೈನಿಕರ ನಡುವಿನ ಸಂಘರ್ಷದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಆದ್ದರಿಂದ ಭಾರತ– ಚೀನಾ ಜಂಟಿ ಸಹಭಾಗಿತ್ವದ ಕಂಪನಿ ಸಲ್ಲಿಸಿರುವ ಬಿಡ್ಅನ್ನು ರೈಲ್ವೆ ಇಲಾಖೆ ತಿರಸ್ಕರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.